1981ರ ನವೆಂಬರ್ 20ರಂದು ಕಪುಸ್ಟಿನ್ ಯಾರ್ ನಿಂದ ಇಂಟರ್ ಕಾಸ್ಮೋಸ್ ಉಡಾವಣಾ ವಾಹನದಿಂದ ಉಡಾಯಿಸಲಾಯಿತು
ಉದ್ದೇಶಗಳು
ಜಲವಿಜ್ಞಾನ, ಅರಣ್ಯ ಮತ್ತು ಭೂವಿಜ್ಞಾನಕ್ಕೆ ಸಂಬಂಧಿಸಿದ ಅನ್ವಯಿಕೆಗಳಿಗಾಗಿ ಭೂಮಿ ವೀಕ್ಷಣೆ ಯ ಪ್ರಯೋಗಗಳನ್ನು ನಡೆಸುವುದು.
ಉಪಗ್ರಹ ಮೈಕ್ರೋವೇವ್ ರೇಡಿಯೋಮೀಟರ್ (SAMIR) ಬಳಸಿ ಸಾಗರ ಮೇಲ್ಮೈ ಅಧ್ಯಯನಗಳನ್ನು ನಡೆಸುವುದು
ಯಶಸ್ವಿ ಕಾರ್ಯಾಚರಣೆ
ಉಪಗ್ರಹದಲ್ಲಿ ಅಳವಡಿಸಲಾದ ಎರಡು ಕ್ಯಾಮೆರಾಗಳಲ್ಲಿ ಒಂದು ಸಮಸ್ಯೆ ಎದುರಿಸುತ್ತಿದ್ದರೂ ಸಹ, ಎರಡು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಕಳುಹಿಸಿತು ಮತ್ತು ಅವುಗಳನ್ನು ಹಲವಾರು ಅಧ್ಯಯನಗಳಿಗೆ ಬಳಸಲಾಯಿತು
ನವೆಂಬರ್ 20: ಈ ದಿನದಂದು – ಎಡ್ವಿನ್ ಪೊವೆಲ್ ಹಬಲ್ ರವರ ಜನ್ಮದಿನ
ಎಡ್ವಿನ್ ಪೊವೆಲ್ ಹಬಲ್ ರವರ ಜನನ ನವೆಂಬರ್ 20, 1889
1920ರ ದಶಕದ ಮಧ್ಯಭಾಗದವರೆಗೂ, ಬಹುತೇಕ ವಿಜ್ಞಾನಿಗಳು, ಮಿಲ್ಕಿ ವೇ ಇಡೀ ಬ್ರಹ್ಮಾಂಡವೆಂದು ಮತ್ತು ಅದು ಸ್ಥಿರವೆಂದು ಭಾವಿಸಿದ್ದರು.
ಎಡ್ವಿನ್ ಹಬಲ್ ನ ಸಂಶೋಧನೆಗಳು ಬ್ರಹ್ಮಾಂಡದ ಬಗೆಗಿನ ನಮ್ಮ ಕಲ್ಪನೆಯನ್ನು ಬದಲಾಯಿಸಿದವು, ಮೊದಲನೆಯದಾಗಿ ಬ್ರಹ್ಮಾಂಡವು ಹಿಂದೆ ಯೋಚಿಸಿದ್ದಕ್ಕಿಂತ ದೊಡ್ಡದು. ಎರಡನೆಯದಾಗಿ, ಅದು ವಿಸ್ತಾರಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ
ಅನೇಕ ಗ್ಯಾಲಕ್ಸಿಗಳ ವ್ಯೂಹವನ್ನು ಹೊಂದಿರುವ ಬ್ರಹ್ಮಾಂಡದಲ್ಲಿ ನಾವು ವಾಸಿಸುತ್ತಿದ್ದೇವೆ ಎಂದು ಹಬಲ್ ತೋರಿಸಿದರು
ಇವರ ಗೌರವಾರ್ಥವಾಗಿ ದೊಡ್ಡ ಬಾಹ್ಯಾಕಾಶ ದೂರದರ್ಶಕವನ್ನು ಹಬಲ್ ಸ್ಪೇಸ್ ಟೆಲಿಸ್ಕೋಪ್ (HST) ಎಂದು ಮರುನಾಮಕರಣ ಮಾಡಲಾಯಿತು.
ನವೆಂಬರ್ 20: ಈ ದಿನದಂದು – ಕಾರ್ಲ್ ವಾನ್ ಫ್ರಿಶ್ ರವರ ಜನ್ಮದಿನ
1886ರ ನವೆಂಬರ್ 20ರಂದು ವಿಯೆನ್ನಾದಲ್ಲಿ ಜನಿಸಿದರು
ಜೀವಿಗಳಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯ ಬಗ್ಗೆ ನಡೆಸಿದ ಸಂಶೋಧನೆಗೆ ಇವರಿಗೆ 1973ರಲ್ಲಿ ಕೊನ್ರಾಡ್ ಲೊರೆಂಜ್ ಮತ್ತು ನಿಕೋಲಾಸ್ ಟಿನ್ ಬರ್ಗೆನ್ ರವರುಗಳ ಜೊತೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.”
ಮುಖ್ಯವಾಗಿ ಕಾರ್ಲ್ ವಾನ್ ಫ್ರಿಶ್ ಜೇನುಗಳ “ಭಾಷೆ” ಕುರಿತ ಸಂಶೋಧನೆಗೆ ಹೆಸರುವಾಸಿ.
ಇವರು ಜೇನುಗಳು ಪರಸ್ಪರ ಮಾಹಿತಿಯನ್ನು ಸಂವಹನ ಮಾಡಲು ಬಳಸುವ ವಿಧಾನಗಳನ್ನು ವಿವರಿಸಿದರು.