ನವೆಂಬರ್ 18: ಈ ದಿನ, ಅಂದು ಲಿನಸ್ ಪೌಲಿಂಗ್ ರವರು ‘ಸಿ’ ವಿಟಮಿನ್ ಹೆಚ್ಚಿನ ಪ್ರಮಾಣ ಸೇವನೆಯಿಂದ ಶೀತವನ್ನು ದೂರವಿಡಬಹುದು ಎಂದು ಘೋಷಿಸಿದರು.
1970ರಲ್ಲಿ, ಲಿನಸ್ ಪೌಲಿಂಗ್ ರವರು ‘ಸಿ’ ವಿಟಮಿನ್/ ಜೀವಸತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಶೀತವನ್ನು ದೂರವಿಡಬಹುದು ಎಂದು ಘೋಷಿಸಿದರು.
ಲಿನಸ್ ಪೌಲಿಂಗ್ ರವರ ‘ವಿಟಮಿನ್ ಸಿ ಮತ್ತು ಕಾಮನ್ ಕೋಲ್ಡ್’ ಎಂಬ ಪುಸ್ತಕ ಪ್ರಕಟವಾದಾಗ ಈ ವಿಷಯದಲ್ಲಿ ಜನಸಾಮಾನ್ಯರ ಆಸಕ್ತಿಯನ್ನು ಹುಟ್ಟುಹಾಕಿತು,
ಅವರ ಪ್ರಕಾರ ಬಹುತೇಕ ಜನರಿಗೆ ವಿಟಮಿನ್ ‘ಸಿ’ ನ ಸೂಕ್ತ ದೈನಂದಿನ ಸೇವನೆಯು 2.3 ಗ್ರಾಂನಿಂದ 10 ಗ್ರಾಂಗಳವರೆಗೆ ಇರುತ್ತದೆ.
2016ರಲ್ಲಿ ಅಮಂಡ ಬುಚರ್ ಮತ್ತು ನಿಕೋಲ್ ವೈಟ್ ಅವರು ಪ್ರಕಟಿಸಿದ ಒಂದು ಅಧ್ಯಯನದ ಪ್ರಕಾರ ವಿಟಮಿನ್ ‘ಸಿ’ ಅನ್ನು ಪ್ರತಿ ದಿನ 0.2 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ನೆಗಡಿಯ ತೀವ್ರತೆ ಮತ್ತು ಅವಧಿ ಕಡಿಮೆಯಾಗುತ್ತದೆ.
ವಿಟಮಿನ್ ‘ಸಿ’ ಮಾನವರ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ, ಆದುದರಿಂದ, ಇದನ್ನು ಆಹಾರದ ಮೂಲಗಳಿಂದ ಪಡೆಯಬೇಕಾಗಿರುತ್ತದೆ
ತಾಜಾ ಹಣ್ಣುಗಳು ಮತ್ತು ತರಕಾರಿಗಳಂತಹ ಆಹಾರ ಮೂಲಗಳಿಂದ, ವಿಶೇಷವಾಗಿ ಸಿಟ್ರಸ್ ಹಣ್ಣುಗಳ ಮೂಲಕ ವಿಟಮಿನ್ ‘ಸಿ’ ಅನ್ನು ಸೇವಿಸಬಹುದಾಗಿದೆ.