ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನೇತ್ರ ನಿಯಂತ್ರಿತ ರೋಬೊಟ್ ಕೈ

1 min read
Photo

ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ತಂಡವು ಕಂಪ್ಯೂಟರ್ ಇಂಟರ್ಫೇಸ್ ಬಳಸಿ ಕಣ್ಣಿನ ಚಲನೆಯಿಂದ ಕಾರ್ಯ ನಿರ್ವಹಿಸಬಲ್ಲ ರೋಬಾಟ್ ಕೈಯನ್ನು ವಿನ್ಯಾಸಗೊಳಿಸಿದೆ, ಮಾತು ಮತ್ತು ನರಗಳ ಅತಿಯಾದ ದುರ್ಬಲತೆ ಹೊಂದಿರುವ ವಿಕಲ ಚೇತನ ಮಕ್ಕಳಿಗೆ ಈ ಸಂಶೋಧನೆ ಆಶಾಧಾಯಕವಾಗದೆ.

ಈ ಸಂಶೋಧನೆ, ಇತರೆ ಕಣ್ಣಿನ ಟ್ರಾಕಿಂಗ್ ವ್ಯವಸ್ಥೆಗಳಿಗಿಂತ ವಿಭಿನ್ನವಾಗಿದ್ದು, ತಲೆಗೆ ಅಳವಡಿಸುವ ಉಪಕರಣಗಳ ಬದಲಾಗಿ ವೆಬ್‌ಕ್ಯಾಮ್ ಮತ್ತು ಕಂಪ್ಯೂಟರ್ ಮಾತ್ರ ಬಳಸಲಾಗುತ್ತದೆ. ಈವರೆಗೆ ವಿಕಲ ಚೇತನರಿಗೆ ಜಾಯ್‌ಸ್ಟಿಕ್, ಮೌಸ್ ಅಥವಾ ಟ್ರ್ಯಾಕ್‌ಬಾಲ್‌ನಂತಹ ಸಾಧನಗಳನ್ನು ಭೌತಿಕವಾಗಿ ನಿರ್ವಹಿಸುವುದು ಅಥವಾ ಮಾತನ್ನು ಗುರುತಿಸಬಲ್ಲ ಸ್ಪೀಚ್ ರೆಕಗ್ನೀಷನ್ ವ್ಯವಸ್ಥೆಗಳನ್ನು ಬಳಸುವುದು ಬಹಳ ಕಷ್ಟಕರವಾಗಿತ್ತು.

ಸೆಂಟರ್ ಫಾರ್ ಪ್ರೊಡಕ್ಟ್ ಡಿಸೈನ್ ಅಂಡ್ ಮ್ಯಾನ್ಯೂಫ್ಯಾಕ್ಚರಿಂಗ್ (ಸಿಪಿಡಿಎಂ) ನಲ್ಲಿ ಪ್ರೊ. ಪ್ರದೀಪ್ತಾ ಬಿಸ್ವಾಸ್ ನೇತೃತ್ವದ ಸಂಶೋಧಕರ ತಂಡವು ವಿನ್ಯಾಸಗೊಳಿಸಿದ ರೊಬೊಟಿಕ್ ಕೈಯನ್ನು ಬಳಸಿ, ವಿಕಲಚೇತನರು ತಮ್ಮ ಕಣ್ಣಿನ ನೋಟವನ್ನು ಯಾಂತ್ರಿಕ ಕಾರ್ಯಗಳನ್ನು ನಿರ್ವಹಿಸಲು ಬಳಸಬಹುದಾಗಿದೆ. ಇದು ಫ್ಯಾಬ್ರಿಕ್ ಪ್ರಿಂಟಿಂಗ್ ಮತ್ತು ಇತರೆ ಕರಕುಶಲ ವಸ್ತುಗಳ ಮೇಲೆ ಸ್ವತಂತ್ರವಾಗಿ ಸಾಮಾನ್ಯರಂತೆ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಈ ವ್ಯವಸ್ಥೆಯನ್ನು ಚನೈನಲ್ಲಿರುವ ವಿದ್ಯಾ ಸಾಗರ್ (ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಇಂಡಿಯಾ) ಸಂಸ್ಥೆಯಲ್ಲಿ ನಿಯೋಜಿಸಲಾಗಿದ್ದು, ಬಳಕೆಯಲ್ಲಿದೆ. ವಿಕಲಚೇತನರಲ್ಲಿ ಅನೇಕರು (ಸೆರೆಬ್ರಲ್ ಪಾಲ್ಸಿ ಹೊಂದಿರುವವರು) ಕಣ್ಣಿನ ಅನಿಯಂತ್ರಿತ ಚಲನೆಯಿಂದಾಗಿ ತಮ್ಮ ದೃಷ್ಟಿಗೋಚರ ಕ್ಷೇತ್ರದಲ್ಲಿ ಒಂದೇ ಕಡೆ ನಿಖರವಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ದೃಶ್ಯ ಕ್ಷೇತ್ರದ ಎಲ್ಲಾ ಭಾಗಗಳನ್ನು ಸಮಾನವಾಗಿ ನೋಡಲು ಸಹ ಅವರಿಗೆ ಸಾಧ್ಯವಾಗುವುದಿಲ್ಲ. ಪ್ರೊ. ಬಿಸ್ವಾಸ್ ಮತ್ತು ಅವರ ತಂಡವು ಮುಖದ ವಿಡಿಯೋ ಲೈವ್ ಫೀಡ್‌ಗಳನ್ನು ವಿಶ್ಲೇಷಿಸಲು ಕಂಪ್ಯೂಟರ್ ವಿಷನ್ ಮತ್ತು ಮಷೀನ್ ಲರ್ನಿಂಗ್ ಆಲ್ಗರಿದಮ್ಸ್ ಬಳಸಿ, ಅವರು ಎಲ್ಲಿ ನೋಡುತ್ತಿದ್ದಾರೆಂದು ಅಂದಾಜು ಮಾಡಿ, ನಂತರ ಅಗಮೆಂಟೆಡ್ ರಿಯಾಲಿಟಿ ಅಪ್ಲಿಕೇಶನ್ ಮೂಲಕ ರೊಬೊಟಿಕ್ ಕೈಯನ್ನು ಬಳಸಿ ವಸ್ತುಗಳನ್ನು ಎತ್ತಿಕೊಳ್ಳುವ ಮತ್ತು ಬಿಡುವಂತಹ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.

ಸಂಶೋಧನಾ ತಂಡವು ಈ ಹೊಸ ತಂತ್ರಜ್ಞಾನವನ್ನು ಕಲಿಸಲು ವಿಡಿಯೊ ಗೇಮ್ಸ್.ನ್ನು  ಮಾಧ್ಯಮವಾಗಿ ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ವಿಕಲಚೇತನರು ಇ-ಕಲಿಕೆಗಾಗಿ ಇದನ್ನು ಬಳಸಲು ಅನುಕೂಲವಾಗಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Copyright © 2019. Karnataka Science and Technology Academy. All rights reserved.
Skip to content