ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕ್ವಾಂಟಮ್ ಇಂಟರ್ನೆಟ್ – ಹ್ಯಾಕಿಂಗ್ ಇನ್ನು ಅಸಾಧ್ಯ!

1 min read

ಇಂದಿನ ಆನ್‌ಲೈನ್ ಯುಗ ಮತ್ತು ಮನೆಯಿಂದ ಕೆಲಸ ಮಾಡುವ (ವರ್ಕ್ ಫರ್ಮ್ ಹೊಂಮ್) ಸನ್ನಿವೇಶದಲ್ಲಿ, ಡೇಟಾ ಸುರಕ್ಷತೆ ಮತ್ತು ಸೂಕ್ಷ್ಮ ಮಾಹಿತಿಯ ರಕ್ಷಣೆಯ ಬಗ್ಗೆ ಗಂಭೀರ ಕಾಳಜಿ ವಹಿಸಬೇಕಾಗಿದೆ. ನಿಮ್ಮ ಡೇಟಾ ಮತ್ತು ಸಂದೇಶಗಳ ಸಂರಕ್ಷಣೆಗೆ ಪ್ರತಿದಿನ ಹೊಸ ಹೊಸ ವಿಧಾನಗಳು ಅಥವಾ ಕ್ರಮಾವಳಿಗಳನ್ನು ಬಳಸಲಾಗುತ್ತಿದ್ದರೂ ಸಹ ಡೇಟಾ ಮತ್ತು ಸಂದೇಶಗಳನ್ನು ಕದಿಯಲು ಮತ್ತು ಹ್ಯಾಕ್ ಮಾಡಲು ಅಸಾಧ್ಯವಾಗಿಸುವುದು ಸಾಧ್ಯವಾಗಿಲ್ಲ.

ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಹೆಚ್. ಹೆಚ್. ವಿಲ್ಸ್ ಫಿಸಿಕಲ್ ಲ್ಯಾಬೊರೇಟರಿ ಹಾಗೂ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಕ್ಯೂ.ಇ.ಟಿ ಲ್ಯಾಬ್.ನ  ಪ್ರೊ. ಸಿದ್ದಾರ್ಥ್ ಕೊಡೂರು ಜೋಶಿ ಮತ್ತು ತಂಡವು ಕ್ವಾಂಟಮ್ ಇಂಟರ್ನೆಟ್ ಒಂದು ಹೊಸ ಪ್ರಕಾರದ ಅಂತರ್ಜಾಲ ಮತ್ತು ಜಾಗತಿಕ ನೆಟ್‌ವರ್ಕ್‌ನ ಆಗಿದ್ದು, ಇದರಲ್ಲಿ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತದೆ, ಸಂಪರ್ಕಗಳು ಖಾಸಗಿಯಾಗಿರುತ್ತವೆ ಮತ್ತು ಮಾಹಿತಿಯನ್ನು ಕದಿಯಲು ಸಾದ್ಯವಿಲ್ಲ ಎಂದು ತೋರಿಸಿಕೊಟ್ಟದ್ದಾರೆ. ಅವರು 28 ಜೋಡಿಯ, ಎಂಟು ಬಳಕೆದಾರರ ನಡುವೆ  ಏಕಕಾಲಿಕ ಮತ್ತು ಸುರಕ್ಷಿತ ಸಂಪರ್ಕವನ್ನು ಕಲ್ಪಿಸಿ ಪ್ರದರ್ಶಿಸಿದ್ದಾರೆ. ಅಲ್ಲದೆ, ಈ ಹೊಸ ನೆಟ್‌ವರ್ಕ್ ಟೋಪೋಲಜಿಯನ್ನು ಬಹು ಬಳಕೆದಾರರಿಗೆ ಸುಲಭವಾಗಿ ಪರಿವರ್ತಿಸಹುದಾಗಿದ್ದು, ಮಾಹಿತಿ ಸಂಚಾರ ನಿರ್ವಹಣೆ ವೈಶಿಷ್ಟ್ಯಗಳನ್ನು ಹೊಂದಿರುವುದಲ್ಲದೆ ಅಗತ್ಯವಿರುವ ಮೂಲಸೌಕರ್ಯಗಳೂ ಸಹ ಕಡಿಮೆ ಎಂದು ತೋರಿಸಿಕೊಟ್ಟಿದ್ದಾರೆ.

ಪ್ರಸ್ತುತ ಆನ್‌ಲೈನ್ ಡೇಟಾವನ್ನು ಸುಲಭವಾದ ಗಣಿತದ ಸಮಸ್ಯೆಗಳನ್ನು ಬಳಸಿಕೊಂಡು ಎನ್‌ಕ್ರಿಪ್ಟ್ ಮಾಡಲಾಗುತ್ತಿದ್ದು, ಇದನ್ನು ಅನ್ಲಾಕ್ ಮಾಡುವುದು ಸುಲಭ. ಕ್ವಾಂಟಮ್ ಸಂವಹನದಲ್ಲಿ, ಕೀಲಿಗಳನ್ನು ಫೋಟಾನ್‌ಗಳನ್ನು ಬಳಸಿ ರಚಿಸಲಾಗುತ್ತದೆ ಮತ್ತು ಕ್ವಾಂಟಮ್ ಭೌತಶಾಸ್ತ್ರದ ತತ್ವಗಳ ಪ್ರಕಾರ ಫೋಟಾನ್‌ಗಳ ನಿಖರವಾದ ನಕಲನ್ನು ಮಾಡುವುದು ಅಸಾಧ್ಯ. ಈ ಕೀಲಿಗಳನ್ನು ನಕಲಿಸುವ ಯಾವುದೇ ಪ್ರಯತ್ನಗಳನ್ನು ಪತ್ತೆ ಮಾಡಬಹುದಾಗಿದ್ದು, ಉನ್ನತ ಮಟ್ಟದ ಕಂಪ್ಯೂಟರ್‌ಗಳನ್ನು ಹೊಂದಿರುವ ಹ್ಯಾಕರ್‌ಗಳು ಕ್ವಾಂಟಮ್ ಕೀಲಿಯನ್ನು ನಕಲು ಮಾಡಲು ಅಥವಾ ಎನ್‌ಕ್ರಿಪ್ಟ್‌ಗಳಲ್ಲಿರುವ ಸಂದೇಶವನ್ನು ಓದಲು ಸಾಧ್ಯವಿಲ್ಲ.

ಈ ಪರಿಕಲ್ಪನೆಯು ಪ್ರಸ್ತುತ ಉಪಗ್ರಹ ಸಂವಹನ ಮತ್ತು ಫೈಬರ್-ಆಪ್ಟಿಕ್ ಕೇಬಲ್‌ಗಳಲ್ಲಿ ಅಳವಡಿಸಲಾಗಿದ್ದರೂ ಸಹ ಈ ಎರಡು-ಬಳಕೆದಾರ ಕ್ಯೂಕೆಡಿ ಪ್ರೋಟೋಕಾಲ್‌ಗಳನ್ನು ಅನೇಕ ಬಳಕೆದಾರರಿಗೆ ಅಳವಡಿಸುವುದು ಕಷ್ಟಸಾಧ್ಯ. ಇದರಿಂದಾಗಿ  ಈವರೆಗೆ ಕ್ವಾಂಟಮ್ ಸಂವಹನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆದರೆ, ಪ್ರೊ. ಸಿದ್ದಾರ್ಥ್ ಮತ್ತು ತಂಡವು ಆಕ್ಟೀವ್ ಸ್ವಿಚಿಂಗ್ ಅಥವಾ ಟ್ರಸ್ಟಡ್ ನೊಡ್ಸ್.ಗಳಿಲ್ಲದೆ ಸಿಟಿ-ವೈಡ್ ಕ್ವಾಂಟಮ್ ಸಂವಹನ ಜಾಲವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದು, ಪ್ರಸ್ತುತ ಅಂತರ್ಜಾಲದಂತೆಯೇ ವ್ಯಾಪಕವಾದ ಸಂಪರ್ಕವನ್ನು ಕಂಪ್ಯೂಟೇಶನಲ್ ವಿಧಾನಗಳ ಬದಲಾಗಿ ಭೌತಶಾಸ್ತ್ರದ ನಿಯಮಗಳ ಆಧಾರದ ಸುರಕ್ಷತೆಯೊಂದಿಗೆ, ಸಕ್ರಿಯಗೊಳಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.

ಉಲ್ಲೇಖ: Siddarth Koduru Joshi et al. A trusted node-free eight user metropolitan quantum communication network, Science Advances, Vol 6; No. 3, eaba0959; 02 Sep. 2020

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content