Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಹ್ಯಾಲೋವಿನ್ ನೀಲ ಚಂದ್ರ – 2020

ನಮಗೆಲ್ಲ ತಿಳಿದಿರುವಂತೆ, ಒಂದು ವರ್ಷದಲ್ಲಿ 12 ಹುಣ್ಣಿಮೆಗಳು, ಅಂದರೆ ತಿಂಗಳಿಗೊಮ್ಮೆ, ಪ್ರತಿ ಋತುವಿನಲ್ಲಿ ಮೂರು. ಪ್ರತಿ ಹುಣ್ಣಿಮೆಯು 29.5 ದಿನಗಳಿಂದ ಕೂಡಿದ್ದು, ಚಂದ್ರನು 12 ಪೂರ್ಣ ಹುಣ್ಣಿಮೆಗಳನ್ನು ಪೂರ್ಣಗೊಳಿಸಲು 354 ದಿನಗಳು ಬೇಕಾಗುತ್ತದೆ. ವರ್ಷದ ಉಳಿಕೆ ದಿನಗಳು ಸೇರುತ್ತಾ ಬಂದು ಎರಡು ವರೆ ವರ್ಷಗಳಿಗೊಮ್ಮೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 13 ಹುಣ್ಣಿಮೆಗಳು ಕಾಣಿಸಿಕೊಳ್ಳುತ್ತವೆ, ಈ ಹೆಚ್ಚುವರಿ ಹುಣ್ಣಿಮೆ ಒಂದು ಅಪರೂಪದ ಘಟನೆಯಾಗಿದ್ದು, ಇದನ್ನು ನೀಲ ಚಂದ್ರ ಅಥವಾ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.

  • ಬ್ಲೂ ಮೂನ್ ಪ್ರತಿ 19 ವರ್ಷಗಳಿಗೊಮ್ಮೆ ಏಳು ಬಾರಿ ಸಂಭವಿಸುತ್ತದೆ.
  • ಹ್ಯಾಲೋವೀನ್ ನ ನೀಲಿ ಚಂದ್ರ ಅಕ್ಟೋಬರ್ 1ರ ನಂತರದ ಎರಡನೇ ಹುಣ್ಣಿಮೆ.
  • ಅಮೇರಿಕಾದ ನ್ಯಾಷನಲ್ ಎರೋನಾಟಿಕ್ಸ್ ಅಂಡ್ ಸ್ಪೇಸ್ ಅಡಮಿನಿಸ್ಟ್ರೇಷನ್ (ನ್ಯಾಸ)ದ ಉಲ್ಲೇಖದಂತೆ 1883ರಲ್ಲಿ ಕ್ರಾಕಟೋವಾ ಎಂಬ ಇಂಡೋನೇಷ್ಯಾದ ಜ್ವಾಲಾಮುಖಿ ಸ್ಫೋಟಗೊಂಡು ಬೂದಿ ಆಕಾಶಕ್ಕೆ ಚದುರಿದ್ದರಿಂದ ಹಾಗೂ  ಈ ಬೂದಿ ಮೋಡಗಳಲ್ಲಿ ಕೆಂಪು ಕಿರಣಗಳನ್ನು ಚದುರಿಸಲು ಸರಿಯಾದ ಗಾತ್ರದ ಕಣಗಳನ್ನು ಹೊಂದಿದ್ದರಿಂದ ಚಂದ್ರ ನೀಲಿಯಾಗಿ ಕಾಣಲು ಕಾರಣವಾಯಿತು. ಇದೊಂದು ಅಪರೂಪದ ಘಟನೆ .
  • ಅಕ್ಟೋಬರ್ 31ರ ರಾತ್ರಿ ಹ್ಯಾಲೋವೀನ್ ನೀಲಿ ಚಂದ್ರ ಕಾಣಲಿದೆ.
  • ನಾಸಾ ದ ಪ್ರಕಾರ, ಮುಂದಿನ ಹ್ಯಾಲೋವೀನ್ ಬ್ಲೂ ಮೂನ್ 2039ರಲ್ಲಿ ಕಾಣಲಿದೆ. ಕಳೆದ ಬಾರಿ ಇಂತಹ ವಿದ್ಯಮಾನವನ್ನು 1944ರಲ್ಲಿ ಕಾಣಲಾಗಿತ್ತು.
  • 2020 ನಿಜಕ್ಕೂ ಆಕಾಶ ನೋಡುವವರಿಗೆ ಬಹಳ ವಿಶೇಷ ವರ್ಷ. ಈ ವರ್ಷ ಮೂರು ಸೂಪರ್ ಮೂನ್ ಗಳು, ನಾಲ್ಕು ಚಂದ್ರಗ್ರಹಣಗಳು ಮತ್ತು ಒಂದು ನೀಲ ಚಂದ್ರ ಸೇರಿದಂತೆ ಒಟ್ಟು 13 ಹುಣ್ಣಿಮೆಗಳು ನಾವು ವೀಕ್ಷಿಸಿದ್ದೇವೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೂರು ಸೂಪರ್ ಮೂನ್ ಗಳನ್ನು ನೋಡಲಾಗಿತ್ತು.

ವರ್ಷದ ಉಳಿದ ಆಕಾಶ ಚಟುವಟಿಕೆಗಳು ನವೆಂಬರ್ 30 ಮತ್ತು ಡಿಸೆಂಬರ್ 29 ರಂದು ನಡೆಯಲಿದೆ. ನವೆಂಬರ್ ನಲ್ಲಿ ಬೀವರ್ ಅಥವಾ ಫ್ರೋಸ್ಟಿ ಮೂನ್ ಮತ್ತು ಒಂದು ಪೆಂಬ್ರೋಲ್ ಚಂದ್ರ ಗ್ರಹಣವನ್ನು ನಾವು ನೋಡಲಿದ್ದೇವೆ ಮತ್ತು 2021ಕ್ಕೆ ಎರಡು ದಿನಗಳ ಮುಂಚೆ ನಾವು ಶೀತಲ ಚಂದ್ರನನ್ನು ನೋಡಲಿದ್ದೇವೆ. ಡಿಸೆಂಬರ್ ನಲ್ಲಿ ಹುಣ್ಣಿಮೆಯನ್ನು ಶೀತಚಂದ್ರ ಎಂದು ಕರೆಯಲಾಗುತ್ತದೆ, ಏಕೆಂದರೆ ತಾಪಮಾನವು ತೀವ್ರವಾಗಿ ಇಳಿಮುಖವಾಗುತ್ತದೆ ಮತ್ತು ಬೀವರ್ ಚಂದ್ರ ನವೆಂಬರ್ ಮೊದಲ ಹುಣ್ಣಿಮೆಯಾಗಿದೆ.

ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.