ಹಮ್ಮಿಂಗ್ ಬರ್ಡ್ಸ್ – ಹಿಂದಕ್ಕೆ ಹಾರಬಲ್ಲ ಏಕೈಕ ಪಕ್ಷಿ
1 min read
ಹಮ್ಮಿಂಗ್ ಬರ್ಡ್ಸ್ ಹಿಂದಕ್ಕೆ ಹಾರಬಲ್ಲ ಏಕೈಕ ಹಕ್ಕಿ. ಸುಮಾರು 5 ಇಂಚು ಉದ್ದ ಮತ್ತು 31.75 ಗ್ರಾಂಗಿಂತ ಕಡಿಮೆ ತೂಕವಿರುವ ಈ ಸಣ್ಣ ಪಕ್ಷಿ ಅಮೆರಿಕಕ್ಕೆ ಸ್ಥಳೀಯವಾಗಿದ್ದು, ದೇಹದ ತೂಕದ ಸುಮಾರು ಮೂರನೇ ಒಂದು ಭಾಗವು ಹಾರುವಾಗ ಬಳಸುವ ಸ್ನಾಯುಗಳದ್ದಾಗಿದೆ. ಇವುಗಳ ರೆಕ್ಕೆ ಮಾದರಿಯು ವಿಭಿನ್ನವಾಗಿದ್ದು, ತನ್ನ ರೆಕ್ಕೆಗಳನ್ನು 180 ಡಿಗ್ರಿಗಳ ಮಟ್ಟಿಗೆ ಎಲ್ಲಾ ದಿಕ್ಕುಗಳಲ್ಲಿಯೂ ತಿರುಗಿಸಬಲ್ಲದು. ಇದಕ್ಕೆ ಕಾರಣ ಭುಜದಲ್ಲಿರುವ ವಿಶಿಷ್ಟವಾದ ಗುಂಡು ಮತ್ತು ಗುಳಿ ವ್ಯವಸ್ಥೆ. ಭುಜ ಮತ್ತು ಮೊಣಕೈ ಕೀಲುಗಳು ಅವುಗಳ ಸಣ್ಣ ದೇಹಗಳಿಗೆ ಬಹಳ ಹತ್ತಿರದಲ್ಲಿದ್ದು, ರೆಕ್ಕೆಗಳನ್ನು ಓರೆಯಾಗಿಸಲು ಮತ್ತು ತಿರುಗಿಸಲು ಅನುವು ಮಾಡಿಕೊಡುತ್ತವೆ. ಸೆಕೆಂಡಿಗೆ ಸುಮಾರು 80 ಬಾರಿ ರೆಕ್ಕೆಗಳನ್ನು ಬೀಸಬಲ್ಲ ಈ ಪಕ್ಷಿ ಸೆಕೆಂಡಿಗೆ 15 – 22 ಮೈಲಿ ವೇಗದಲ್ಲಿ ಹಾರಬಲ್ಲವು.
ಮಾಹಿತಿ ಸಂಗ್ರಹ: https://www.discovermagazine.com/ ಮತ್ತು https://www.worldatlas.com/