ಸುಸ್ಥಿರ ಅಭಿವೃದ್ಧಿ ಗುರಿ (ಎಸ್.ಡಿ.ಜಿ) ಸೂಚ್ಯಾಂಕ 2021
1 min readಡಾ. ಆನಂದ್ ಆರ್
ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ಎಸ್.ಡಿ.ಜಿ ಸೂಚ್ಯಂಕವು, 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಪ್ರತಿ ದೇಶವು ಸಾಧಿಸಿದ ಒಟ್ಟಾರೆ ಕಾರ್ಯಕ್ಷಮತೆಯ ಮೌಲ್ಯಮಾಪನ ಅಂಕವಾಗಿದೆ. ಪ್ರತಿ ಗುರಿಗೆ ಸಮಾನ ತೂಕವನ್ನು ನೀಡಲಾಗುತ್ತದೆ ಹಾಗೂ ಅಂಕದ ಆದಾರದ ಮೇಲೆ ‘ಕಳಪೆ (0) ಮತ್ತು ಅತ್ಯುತ್ತಮ (100) ನಡುವಿನ ದೇಶದ ಸ್ಥಾನವನ್ನು ಸೂಚಿಸಲಾಗುತ್ತದೆ. 2015 ರಲ್ಲಿ ಎಸ್ ಡಿಜಿಗಳನ್ನು ಅಳವಡಿಸಿಕೊಂಡ ನಂತರ ಮೊದಲ ಬಾರಿಗೆ, ಜಾಗತಿಕ ಸರಾಸರಿ ಎಸ್.ಡಿ.ಜಿ. ಸೂಚ್ಯಂಕದಲ್ಲಿ ಇಳಿಕೆಯಾಗಿದೆ. ಎಸ್.ಡಿ.ಜಿ. ಸೂಚಕಗಳ ಮೇಲೆ ಕೋವಿಡ್-19 ರ ಪರಿಣಾಮವು ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ.


ಭಾರತದ ಸಾಧನೆ
- 60.1 ಅಂಕದೊಂದಿಗೆ 165 ದೇಶಗಳಲ್ಲಿ 120ನೇ ಸ್ಥಾನದಲ್ಲಿದೆ
- 100 ಕ್ಕೆ 70.4 ಸಾಂಖ್ಯಿಕ ಕಾರ್ಯಕ್ಷಮತೆ ಸೂಚ್ಯಂಕ ಸಾಧಿಸಲಾಗಿದೆ
- 17 ಎಸ್.ಡಿ.ಜಿ. ಗಳಲ್ಲಿ ಭಾರತದ ಸಾಧನೆ 11 ‘ಪ್ರಮುಖ ಸವಾಲುಗಳು’, 03 ‘ಮಹತ್ವದ ಸವಾಲುಗಳು’ ಮತ್ತು 01 ‘ಸವಾಲು ಉಳಿದಿವೆ’ ಮತ್ತು 01 ‘ಎಸ್.ಡಿ.ಜಿ. ಸಾಧಿಸಲಾಗಿದೆ’ ಎಂದು ವರ್ಗೀಕರಿಸಲಾಗಿದೆ
- 06 ಎಸ್.ಡಿ.ಜಿ. ಗಳಲ್ಲಿ ತಕ್ಕಮಟ್ಟಿನ ಸುಧಾರಣೆ; 05 ನಿಶ್ಚಲ; 02 ರಲ್ಲಿ ಇಳಿಕೆ ಕಂಡುಬಂದಿದೆ