ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಾಗರದಾಳದ ಅಧ್ಯಯನಕ್ಕೆ ಬೆಳಕು ಮತ್ತು ಶಬ್ದ ಸಂಯೋಜಿತ ವೈಮಾನಿಕ ಸೋನಾರ್ ವ್ಯವಸ್ಥೆ

1 min read

ನಮಗೆಲ್ಲಾ ತಿಳಿದಿರುವಂತೆ ಈಗಿರುವ ತಂತ್ರಜ್ಞಾನದ ಮೂಲಕ ಸಾಗರ ಮತ್ತು ಅದರ ತಳದ ಅಧ್ಯಯನವು ತಾಂತ್ರಿಕ ಕಾರಣಗಳಿಂದಾಗಿ ಒಟ್ಟು ಜಾಗತಿಕ ವ್ಯಾಪ್ತಿಯ ಕೇವಲ ಶೇಖಡ 5 ರಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪ್ರಸ್ತುತ ಸೊನಾರ್ ನೀರಿನ ಮೇಲ್ಮೈ ಮತ್ತು ಆಳದ ಅಧ್ಯಯನಕ್ಕೆ ಆಶಾಧಾಯಕವಾಗಿದ್ದರೂ, ಅದು ನೀಡುವ ಜಿತ್ರಗಳು ಹೆಚ್ಚಿನ ವಿವಿರಗಳನ್ನು ನೀಡುವಲ್ಲಿ ಅಸಾಮರ್ಥ್ಯವಾಗಿದ್ದು, ವಿಶಾಲತೆಯ ವ್ಯಾಪ್ತಿ ಸೀಮಿತವಾಗಿದೆ. ಮತ್ತೊಂದೆಡೆ, ವೈಮಾನಿಕ ಸಿಂತೆಟಿಕ್ ಅಪರ್ಚರ್ ರೇಡಾರ್ ವ್ಯವಸ್ಥೆಗಳು ಇಡೀ ಭೂಮಿಯ ಭೂದೃಶ್ಯದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಮೋಡಗಳ ಒಳಗೆ ನುಸುಳಿ ಒದಗಿಸುತ್ತಿದ್ದರೂ ಸಹ ನೀರಿನಾಳಕ್ಕೆ ನುಸುಳುವಿಕೆಯಲ್ಲಿ ಅಸಮರ್ಥವಾಗಿದೆ.

ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಎಂಜಿನಿಯರ್.ಗಳಾದ ಏಡನ್ ಫಿಟ್ಜ್ ಪ್ಯಾಟ್ರಿಕ್, ಅಜಯ್ ಸಿಂಘ್ವಿ ಮತ್ತು ಅಮಿನ್ ಅರ್ಬೇಬಿಯನ್.ರವರ ತಂಡ ಸಾಗರದಾಳದ ಅಧ್ಯಯನಕ್ಕೆ ಬೆಳಕು ಮತ್ತು ಶಬ್ಧ ಸಂಯೋಜಿತ ವಾಯುಗಾಮಿ ಸೋನಾರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಯನ್ನು ಡ್ರೋನ್.ಗಳ ತಳಭಾಗಕ್ಕೆ ಅಳವಡಿಸಬಹುದು ಹಾಗೂ ಇದರಿಂದ ಉನ್ನತ-ರೆಸಲ್ಯೂಶನ್ ಚಿತ್ರಗಳೊಂದಿಗೆ ಸಮುದ್ರದಾಳದ ಅಧ್ಯಯನಗಳನ್ನು ಕೈಗೊಳ್ಳಬಹುದಾಗಿದೆ. ಈವರೆಗಿನ, ಹೆಚ್ಚಿನ ಸಾಗರದಾಳದ ನಕ್ಷೆಗಳನ್ನು ನಿರ್ದಿಷ್ಟ ಆಸಕ್ತಿಯ ಪ್ರದೇಶದಲ್ಲಿ ಹಡಗುಗಳಿಗೆ ಸೊನಾರ್ ವ್ಯವಸ್ಥೆಯನ್ನು ಅಳವಡಿಸಿ ತಯಾರಿಸಲಾಗುತ್ತಿದೆ. ಆದರೆ ಈ ವಿಧಾನವು ತುಂಬಾ ನಿಧಾನ ಮತ್ತು ದುಬಾರಿಯಾಗಿದೆ ಮತ್ತು ವಿಶಾಲವಾದ ಪ್ರದೇಶಗಳ ಅಧ್ಯಯನಕ್ಕೆ ಅಸಮರ್ಥವಾಗಿದೆ.

ಈ ಬೆಳಕು ಮತ್ತು ಶಬ್ಧ ಸಂಯೋಜಿತ ವೈಮಾನಿಕ ಸೋನಾರ್ ವ್ಯವಸ್ಥೆಯ ಮೂಲಕ ಮುಂದೊಂದು ದಿನ ದ್ರೊಣ್ ಮೂಲಕ ವೈಮಾನಿಕವಾಗಿ ಸಾಗರದ ಜಲಚರಗಳ ಅಧ್ಯಯನ, ಮುಳುಗಡೆಯಾದ ಹಡಗು ಮತ್ತು ವಿಮಾನಗಳ ಪತ್ತೆ, ಭೂ ಪ್ರದೇಶಗಳಂತೆ ವಿವರವುಳ್ಳ ಸಾಗರದ ನಕ್ಷೆಗಳನ್ನು ತ್ವರಿತವಾಗಿ ತಯಾರಿಸಬಹುದೆಂಬ ಆಶಯವನ್ನು ವಿಶ್ವವಿದ್ಯಾಲಯದ ಎಂಜಿನಿಯರ್.ಗಳು ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content