Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪಾರದರ್ಶಕ ಗ್ರ್ಯಾಫೀನ್ ವಿದ್ಯುದ್ವಾರಗಳಿಂದ ಹೊಸ ಪೀಳಿಗೆಯ ಹಗುರವಾದ, ಬಾಗುವ ಸೌರ ಕೋಶಗಳು ಮತ್ತು ಪರದೆಗಳು

1 min read

ಶುದ್ಧ ಇಂಗಾಲದ ಒಂದು ರೂಪವಾದ ಗ್ರ್ಯಾಫೀನ್, ಷಡ್ಭುಜೀಯ ಶ್ರೇಣಿಯಲ್ಲಿ ಸಮತಟ್ಟಾದ ಪರಮಾಣು ಜೋಡಣಾ ವ್ಯೆವಸ್ಥೆಯನ್ನು ಹೊಂದಿದೆ. ಉತ್ಕೃಷ್ಟ ವಿದ್ಯುತ್ ಮತ್ತು ಯಾಂತ್ರಿಕ ಗುಣಲಕ್ಷಣಗಳನ್ನು ಹೊಂದಿರುವ ಗ್ರ್ಯಾಫೀನ್, ಹೇರಳವಾದ ಅಗ್ಗದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ಅತ್ಯಂತ ತೆಳ್ಳಗಿರುತ್ತದೆ ಮತ್ತು ಬಾಗುವ ಲಕ್ಷಣಗಳನ್ನು ಹೊಂದಿದೆ. ಇದಲ್ಲದೆ, ತಾಮ್ರವನ್ನು ಸೀಡ್ ಪದರವಾಗಿ ಬಳಸಿಕೊಂಡು ರಾಸಾಯನಿಕ ಆವಿ ಶೇಖರಣೆ (ಸಿವಿಡಿ) ಮೂಲಕ ದೊಡ್ಡ ಹಾಳೆಗಳ ರೂಪದಲ್ಲಿ ಇದನ್ನು ಸುಲಭವಾಗಿ ವೃದ್ಧಿಸಬಹುದಾಗಿದೆ. ಉತ್ತಮ-ಗುಣಮಟ್ಟದ, ತೆಳುವಾದ ಗ್ರ್ಯಾಫೀನ್‌ನ ದೊಡ್ಡ ಹಾಳೆಗಳನ್ನು ತಯಾರಿಸುವ ಈ ಹೊಸ ವಿಧಾನದಿಂದಾಗಿ ಅತ್ಯಂತ ಹಗುರವಾದ, ಬಾಗುವ ಸೌರ ಕೋಶಗಳು ಮತ್ತು ಹೊಸ ವರ್ಗದ ಬೆಳಕು-ಹೊರಸೂಸುವ ಸಾಧನಗಳು ಮತ್ತು ಇತರ ತೆಳು-ಫಿಲ್ಮ್ ಎಲೆಕ್ಟ್ರಾನಿಕ್ಸ್‌ಗಳ ತಯಾರಿಕೆಗೆ ನಾಂದಿಯಾಗಲಿದೆ. ಅಮೇರಿಕಾದ ಎಂಐಟಿನಲ್ಲಿ ಅಭಿವೃದ್ಧಿಪಡಿಸಲ್ಪಟ್ಟ ಈ ಹೊಸ ಉತ್ಪಾದನಾ ಪ್ರಕ್ರಿಯೆಯು ಕೈಗಾರಿಕಾ ಉತ್ಪಾದನೆಯ ಕ್ಷಮತೆಯನ್ನು ಹೊಂದಿದೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.