ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪ್ರೊ. ಸಿ. ಎನ್. ಆರ್. ರಾವ್ – ಕೆ.ಎಸ್.ಟಿ.ಎ. ಜೀವಮಾನ ಸಾಧನೆ ಪ್ರಶಸ್ತಿ

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯವಿಜ್ಞಾನ (ಸ್ಟೀಮ್)ದಲ್ಲಿ ಜೀವಮಾನದ ಸಾಧನೆಗಾಗಿ ಪ್ರೊ. ಸಿ. ಎನ್. ಆರ್. ರಾವ್  ಪ್ರಶಸ್ತಿ
  • ಸ್ಟೀಮ್ ಕ್ಷೇತ್ರಕ್ಕೆ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಕರ್ನಾಟಕ ಮೂಲದ ಒಬ್ಬ ನಿಪುಣ ಹಿರಿಯ ವಿಜ್ಞಾನಿ/ತಂತ್ರಜ್ಞಾನಿಯೊಬ್ಬರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಯ್ಕೆಯಾದ ವಿಜ್ಞಾನಿ / ತಂತ್ರಜ್ಞರನ್ನು ಕೆಎಸ್‌ಟಿಎ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಥವಾ ಇನ್ನಿತರ ಪ್ರಮುಖ ಕಾರ್ಯಕ್ರಮದಲ್ಲಿ ರೂ. ಎರಡು ಲಕ್ಷಗಳ ಚಿನ್ನದ ಪದಕ, ರೂ. 1.00 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಅಕಾಡೆಮಿ ಫೆಲೋಶಿಪ್ ಮತ್ತು ಸನ್ಮಾನದೊಂದಿಗೆ ಗೌರವಿಸಲಾಗುವುದು.

ಅರ್ಹತೆ

  • ನಾಮನಿರ್ದೇಶಿತರು ಹಿರಿಯ ವಿಜ್ಞಾನಿ / ತಂತ್ರಜ್ಞರಾಗಿರಬೇಕು, ಅವರು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಮತ್ತು ಸ್ಟೀಮ್ ಕ್ಷೇತ್ರದಲ್ಲಿ ಅವರ ವೃತ್ತಿ ಮತ್ತು ಸೇವೆಯಾದ್ಯಂತ ಕನಿಷ್ಠ 20 ವರ್ಷಗಳ ಅವಧಿಯವರೆಗೆ ಗಮನಾರ್ಹವಾದ ಮೂಲ ಕೊಡುಗೆಗಳನ್ನು ನೀಡಿರಬೇಕು.
  • ನಾಮನಿರ್ದೇಶಿತರು ಜನ್ಮ ಅಥವಾ ನಿವಾಸ ಅಥವಾ ಸೇವೆಯಿಂದಾಗಿ ಕರ್ನಾಟಕ ಮೂಲದವರಾಗಿರಬೇಕು. ಈ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಸಮಯದಲ್ಲಿ ಅವರು ಭಾರತ ಅಥವಾ ವಿದೇಶದಲ್ಲಿ ಬೇರೆಲ್ಲಿಯಾದರೂ ವಾಸಿಸುತ್ತಿರಬಹುದು.

ನಾಮನಿರ್ದೇಶನ / ಪ್ರಶಸ್ತಿಗೆ ಮಾನದಂಡ

  • ನಾಮನಿರ್ದೇಶಿತರು ವಿದ್ವತ್ಪೂರ್ಣ ಸಂಶೋಧನಾ ಪ್ರಕಟಣೆಗಳು, ವಿಮರ್ಶಾ ಲೇಖನಗಳು, ಹೆಸರಾಂತ ಸಂಸ್ಥೆಗಳಿಂದ ಮುದ್ರಿತವಾಗಿ ಪ್ರಕಟವಾದ ಪುಸ್ತಕಗಳ ರಚನೆ ಮತ್ತು / ಅಥವಾ ಸಂಪಾದನೆಯಿಂದ ಪ್ರಮಾಣೀಕೃತವಾದಂತೆ ಸ್ಟೀಮ್ (ಮೂಲ ಮತ್ತು / ಅಥವಾ ಅನ್ವಯಿಕ ಕ್ಷೇತ್ರಗಳು) ಅಡಿಯಲ್ಲಿ ಅವರ ವಿಶೇಷ ಕ್ಷೇತ್ರಕ್ಕೆ ಗಮನಾರ್ಹ ಮತ್ತು ಸ್ಥಿರವಾದ ಕೊಡುಗೆಗಳನ್ನು ನೀಡಿರಬೇಕು ಮತ್ತು/ಅಥವಾ ಮಾನ್ಯತೆ ಪಡೆದ ಪ್ರಾಧಿಕಾರಗಳಿಂದ ಪೇಟೆಂಟ್ ಪಡೆದಿರಬೇಕು.
  • ಹೆಚ್ಚುವರಿಯಾಗಿ, ಕಿರಿಯ ವಿದ್ವಾಂಸರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು ಹಾಗೂ ಸಮಾಜದ ಒಳಿತಿಗಾಗಿ ಅಗತ್ಯ-ಆಧಾರಿತ ಮತ್ತು ನವೀನ ಪರಿಹಾರಗಳನ್ನು ಪ್ರಚುರಪಡಿಸುವುದು ಸೇರಿದಂತೆ ಸ್ಟೀಮ್‌ನ ಅಭಿವೃದ್ಧಿ ಮತ್ತು / ಅಥವಾ ಅದರ ಅಡಿಯಲ್ಲಿನ ಸಮಸ್ಯೆಗಳ ತಿಳಿವಳಿಕೆಗಾಗಿ ನಾಮನಿರ್ದೇಶಿತರು ಮಹತ್ವದ ಕೊಡುಗೆಗಳನ್ನು ನೀಡಿರಬೇಕು.
  • ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ನೀಡಲಾಗುತ್ತದೆ ಮತ್ತು ಮರಣೋತ್ತರ ಪ್ರಶಸ್ತಿಗಳನ್ನು ಪರಿಗಣಿಸಲಾಗುವುದಿಲ್ಲ
  • ಕರ್ನಾಟಕ ಸರ್ಕಾರ ಅಥವಾ ಕೆಎಸ್‌ಟಿಎಯಂತಹುದೇ ಉದ್ದೇಶಗಳನ್ನು ಹೊಂದಿರುವ ಮತ್ತೊಂದು ಸಂಸ್ಥೆ ಈಗಾಗಲೇ ಸ್ಥಾಪಿಸಿರುವ ಮತ್ತು ಕರ್ನಾಟಕ ಸರ್ಕಾರದಿಂದ ಧನಸಹಾಯ ಪಡೆದಿರುವ ಇಂತಹುದೇ ಜೀವಮಾನದ ಪ್ರಶಸ್ತಿಯನ್ನು ಈಗಾಗಲೇ ಪಡೆದವರಿಗೆ ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ನೀಡಲಾಗುವುದಿಲ್ಲ.
  • ನಾಮನಿರ್ದೇಶನಗಳನ್ನು ನಿಗಧಿತ ನಮೂನೆಯಲ್ಲಿ ಕೊನೆಯ ದಿನಾಂಕದೊಳಗೆ ಅಕಾಡೆಮಿಗೆ ತಲುಪುವಂತೆ ಕಳುಹಿಸಿಕೊಡಬೇಕು

ನಾಮನಿರ್ದೇಶನ ಅರ್ಜಿ ನಮೂನೆ

word format
ವರ್ಡ್ ನಮೂನೆ

ಪಿಡಿಎಫ್ ನಮೂನೆ

ಮಾರ್ಗಸೂಚಿ

ಪ್ರೊ. ಸಿ. ಎನ್. ಆರ್. ರಾವ್  ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು

(ಮೊದಲಿನ ಹೆಸರು: ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ)

2007

ಪ್ರೊ. ಯು ಆರ್. ರಾವ್ ಮತ್ತು ಪ್ರೊ. ಸಿ ಎನ್ ಆರ್ ರಾವ್ ರವರ ಭಾವ ಚಿತ್ರ

ಪ್ರೊ. ಯು ಆರ್ ರಾವ್ & ಪ್ರೊ. ಸಿ ಎನ ಆರ್ ರಾವ್

2009

ಪ್ರೊ. ರೊದ್ದಂ ನರಸಿಂಹ ರವರ ಭಾವ ಚಿತ್ರ

ಪ್ರೊ. ರೊದ್ದಂ ನರಸಿಂಹ

2010

ಪ್ರೊ. ಆರ್. ದ್ವಾರಕೀನಾಥ್ ರವರ ಭಾವ ಚಿತ್ರ

ಪ್ರೊ. ಆರ್ ದ್ವಾರಕೀನಾಥ್

2011

ಡಾ. ವಿ. ಪ್ರಕಾಶ್ ರವರ ಭಾವ ಚಿತ್ರ

ಡಾ. ವಿ ಪ್ರಕಾಶ್

2012

ಡಾ. ಪಿ. ಎಸ್. ಶಂಕರ್ ರವರ ಭಾವ ಚಿತ್ರ

ಡಾ. ಪಿ. ಎಸ್. ಶಂಕರ್

2013

ಪ್ರೊ. ಶರತ್ಚಂದ್ರ ರವರ ಭಾವ ಚಿತ್ರ

ಪ್ರೊ. ಶರತ್ಚಂದ್ರ

2014

ಡಾ. ವಿ ಅತ್ರೆ ರವರ ಭಾವ ಚಿತ್ರ

ಡಾ. ವಿ ಕೆ ಅತ್ರೆ

2015

ಡಾ. ಬಿ. ಎನ್. ಸುರೇಶ್ ರವರ ಭಾವ ಚಿತ್ರ

ಡಾ. ಬಿ ಎನ್ ಸುರೇಶ್

2016

ಡಾ. ಎ. ಎಸ್. ಕಿರನ್ ಕುಮಾರ್ ರವರ ಭಾವ ಚಿತ್ರ

ಡಾ. ಎ ಎಸ್ ಕಿರಣ್ ಕುಮಾರ್

2017

ಡಾ. ಎಸ. ಕೆ. ಶಿವಕುಮಾರ್ ರವರ ಭಾವ ಚಿತ್ರ

ಡಾ ಎಸ್ ಕೆ ಶಿವಕುಮಾರ್

2018

ಡಾ. ಬಿ. ವಿ ಶ್ರೀಕಂಠನ್ ರವರ ಭಾವ ಚಿತ್ರ

ಡಾ. ಬಿ ವಿ ಶ್ರೀಕಂಠನ್

2019

2020

ಡಾ. ಎಂ. ಮಹದೇವಪ್ಪ
ಪ್ರೊ. ಸಿ. ಕಾಮೇಶ್ವರರಾವ್
ಡಾ. ಕೆ. ಕಸ್ತೂರಿರಂಗನ್
ಡಾ. ಗೋಡ್ಬೋಲೆ ರೋಹಿಣಿ ಮಧುಸೂದನ್

2021

2022

ಪ್ರೊ. ತೆಲ್ಮಾ ಬಿ.ಕೆ.
 
ಡಾ. ಇಡ್ಯಾ ಕರುಣಾಸಾಗರ್

 
 ಡಾ. ಸಿ. ಎ. ವಿರಕ್ತಮಠ್
ಡಾ. ಟಿ. ಶಿವನಂದಪ್ಪ
Copyright © 2019. Karnataka Science and Technology Academy. All rights reserved.