ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಾಂಸ್ಥಿಕ ಸದಸ್ಯತ್ವ

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ವಿಜ್ಞಾನವನ್ನು ರಾಜ್ಯದಲ್ಲಿ ಜನಪ್ರಿಯಗೊಳಿಸಲು, ಅಕಾಡೆಮಿಯು ಸದರಿ ಕ್ಷೇತ್ರಗಳಲ್ಲಿ ತೊಡಗಿರುವ ಸಾರ್ವಜನಿಕ, ಕಾರ್ಪೊರೇಟ್ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳಲು ಯೋಜಿಸಿದೆ.

  • ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ/ನಾವೀನ್ಯತೆಗಳಲ್ಲಿ  ಅಥವಾ ಅಕಾಡೆಮಿಯ ಉದ್ದೇಶಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಪರಸ್ಪರ ಒಪ್ಪಿ ಕಾರ್ಯಕ್ರಮಗಳನ್ನು ನಡೆಸಲು  ಅಕಾಡೆಮಿಯ ಕಾರ್ಪಸ್ ಫಂಡ್‌.ಗೆ ರೂಪಾಯಿ ಒಂದು ಲಕ್ಷ ಕೊಡುಗೆ ನೀಡಲು ಬಯಸುವ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಬಹುದಾಗಿದೆ.
  • ಸದಸ್ಯತ್ವದ ಅವಧಿಯು 10 ವರ್ಷಗಳು
  • ಸಾಂಸ್ಥಿಕ ಸದಸ್ಯತ್ವಕ್ಕಾಗಿ ಆಸಕ್ತಿ ವ್ಯಕ್ತಪಡಿಸಿ ವರ್ಷದ ಯಾವುದೇ ಸಮಯದಲ್ಲಿ ಅರ್ಜಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ.ಯು.ಆರ್. ರಾವ್ ವಿಜ್ಞಾನ ಭವನ, ತೋಟಗಾರಿಕೆ ಕಾಲೇಜು ಪ್ರವೇಶ ದ್ವಾರ, ಜಿಕೆವಿಕೆ ಆವರಣ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ದೊಡ್ಡಬೆಟ್ಟಹಳ್ಳಿ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು 560097 ಇವರಿಗೆ ಕಳುಹಿಸಬಹುದಾಗಿದೆ
  • ಸಾಂಸ್ಥಿಕ ಸದಸ್ಯರು ಅಕಾಡೆಮಿಯ ಉದ್ದೇಶಗಳಿಗೆ ಅನುಗುಣವಾಗಿ ಪರಸ್ಪರ ಒಪ್ಪಿದ ಕ್ಷೇತ್ರಗಳಲ್ಲಿ ಅಕಾಡೆಮಿಯು ಆಯೋಜಿಸಬಹುದಾದ ಕಾರ್ಯಕ್ರಗಳನ್ನು ಶಿಫಾರಸ್ಸು ಮಾಡಬಹುದಾಗಿದ್ದು, ಕಾರ್ಯಕಾರಿ ಸಮಿತಿಯ ಅನುಮೋದನೆಗೆ ಒಳಪಟ್ಟಿರುತ್ತದೆ
  • ಅಕಾಡೆಮಿ ಆಯೋಜಿಸುವ ಎಲ್ಲಾ ವೈಜ್ಞಾನಿಕ ಕಾರ್ಯಕ್ರಗಳಲ್ಲಿ ಭಾಗವಹಿಸಲು ಸಾಂಸ್ಥಿಕ ಸದಸ್ಯರಿಗೆ ಅವಕಾಶ ನೀಡಲಾಗುವುದು
  • ಸಾಂಸ್ಥಿಕ ಸದಸ್ಯರು ಅಕಾಡೆಮಿಯ ಪ್ರಕಟಣೆಗಳನ್ನು ಪಡೆಯಲು ಮತ್ತು ಅಕಾಡೆಮಿಯ ಸಭಾಂಗಣ, ಸಂಪನ್ಮೂಲ ಸೃಜನ ಕೇಂದ್ರ ಮತ್ತು ಅತಿಥಿ ಗೃಹದ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದು

Copyright © 2019. Karnataka Science and Technology Academy. All rights reserved.