ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ

ವಾರ್ಷಿಕ ರಾಜ್ಯ ಮಟ್ಟದ ಸಮ್ಮೇಳನವು ಅಕಾಡೆಮಿಯ ಪ್ರಮುಖ ಕಾರ್ಯಕ್ರಮವಾಗಿದ್ದು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ವಿಚಾರ ಸಂಕಿರಣಗಳು, ಸಂವಾದ ಅಧಿವೇಶನಗಳು ಮತ್ತು ಪ್ರದರ್ಶನಗಳನ್ನು ಹೊಂದಿರುತ್ತದೆ. ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇದು ವೇದಿಕೆಯನ್ನು ಒದಗಿಸುತ್ತದೆ. ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳ ಬಗ್ಗೆ ಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಿಂದ ಉಪನ್ಯಾಸಗಳು ಮತ್ತು ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಸಮ್ಮೇಳನದ ವಿವಿಧ ಅಧಿವೇಶನಗಳಲ್ಲಿ ಪರಿಚಯಿಸಲಾಗುತ್ತದೆ. ಕೇಂದ್ರ ವಿಷಯ, ಉಪ ವಿಷಯಗಳು, ಸಮ್ಮೇಳನದ ಸ್ಥಳ ಮತ್ತು  ಖ್ಯಾತ ವಿಜ್ಞಾನಿಗಳ ಆಹ್ವಾನಿತ ಉಪನ್ಯಾಸಗಳ ಬಗ್ಗೆ ಅಕಾಡೆಮಿಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ. ಅಕಾಡೆಮಿಯ ಈ ಪ್ರಮುಖ ಕಾರ್ಯಕ್ರಮವನ್ನು ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ ಅವಧಿಯಲ್ಲಿ ನಡೆಸಲಾಗುವುದು.

ಉದ್ದೇಶಗಳು

  • ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯ ಬಗ್ಗೆ ನಾಗರಿಕ ಸಮಾಜದ ವಿವಿಧ ಭಾಗಗಳಲ್ಲಿ ಜಾಗೃತಿ ಮೂಡಿಸುವುದು
  • ಇಲಾಖಾ ಅಧಿಕಾರಿಗಳು, ಬೋಧಕ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳ ಕುರಿತು ಆಸಕ್ತಿ ಮೂಡಿಸುವುದು
  • ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಯ ತಿಳುವಳಿಕೆಯನ್ನು ಬೆಳೆಸುವುದುರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಸುಧಾರಿತ ತಾಂತ್ರಿಕ ಸಾಧನಗಳ ಬಳಕೆಯನ್ನು ಜನಪ್ರಿಯಗೊಳಿಸುವುದು
  • ರಾಜ್ಯ ಮತ್ತು ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳಿಗೆ ನೀಡಿದ ಕೊಡುಗೆಗಾಗಿ ಪ್ರಖ್ಯಾತ ವಿಜ್ಞಾನಿಗಳನ್ನು ಸನ್ಮಾನಿಸುವುದು ಮತ್ತು ಪ್ರತಿಭೆಗಳನ್ನು ಗುರುತಿಸುವುದು

ಕಾರ್ಯಕ್ರಮ

  • ಎರಡು ರಿಂದ ಮೂರು ದಿನಗಳ ವರೆಗೆ ನಡೆಯುವ  ಈ ಸಮ್ಮೇಳನದಲ್ಲಿ, ಪ್ರತಿನಿಧಿಗಳು ತಮ್ಮ ಜ್ಞಾನದ ಪರಿದಿಯನ್ನು ವಿಸ್ತರಿಸಿಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚೂಣಿ ವಿಷಯಗಳ ಬಗ್ಗೆ ಖ್ಯಾತ ವಿಜ್ಞಾನಿಗಳು ಮತ್ತು ಪ್ರಖ್ಯಾತ ತಂತ್ರಜ್ಞಾನಿಗಳಿಂದ ವಿಶೇಷ ಆಹ್ವಾನಿತ ಉಪನ್ಯಾಸಗಳನ್ನು ಆಯೋಜಿಸಲಾಗುವುದು. ಸಮ್ಮೇಳನದಲ್ಲಿ ರಾಜ್ಯದ ಬೋಧಕ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಮಾತ್ರವಲ್ಲದೆ ವಿಜ್ಞಾನ ಬರಹಗಾರರು ಹಾಗೂ ಕೆಲವು ಆಸಕ್ತ ಸಾರ್ವಜನಿಕರು ಈ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವರು.
  • ಪ್ರತಿನಿಧಿಗಳು ತಮ್ಮ ಆವಿಷ್ಕಾರಗಳು/ನಾವಿನ್ಯತೆಗಳನ್ನು/ಸಂಶೋಧನಾ ಫಲಿತಾಂಶಗಳನ್ನು ಪೋಸ್ಟರ್ ಪ್ರಸ್ತುತಿಗಳ ರೂಪದಲ್ಲಿ ಪ್ರಸ್ತುತಪಡಿಸಲು ಸಮ್ಮೇಳನವು ಒಂದು ವೇದಿಕೆಯನ್ನೂ ಒದಗಿಸುತ್ತದೆ. ಭೌತ ಮತ್ತು ಗಣಿತ ವಿಜ್ಞಾನಗಳು; ರಾಸಾಯನಿಕ ವಿಜ್ಞಾನಗಳು; ಜೀವ ವಿಜ್ಞಾನಗಳು; ಅಂತರ್‌ಶಿಸ್ತೀಯ ವಿಜ್ಞಾನಗಳು ಮತ್ತು ಇಂಜಿನಿಯರಿಂಗ್ ವಿಜ್ಞಾನಗಳಿಗೆ (ಎಲ್ಲ ಶಾಖೆಗಳನ್ನೂ ಒಳಗೊಂಡಂತೆ) ಸಂಬಂಧಿಸಿದ ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಬಹುದು. ಆಯ್ದ ಸಾರಾಂಶಗಳ ಸಂಗ್ರಹವನ್ನು ಐಎಸ್‌ಬಿಎನ್ ಸಂಖ್ಯೆಯೊಂದಿಗೆ ಸಮ್ಮೇಳನದ ಸಂದರ್ಭದಲ್ಲಿ ಹೊರತರಲಾಗುತ್ತದೆ ಮತ್ತು ಎಲ್ಲ ಪ್ರತಿನಿಧಿಗಳಿಗೂ ವಿತರಿಸಲಾಗುತ್ತದೆ.
  • ವೈಜ್ಞಾನಿಕ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸಲು, ಕೆಎಸ್‌ಟಿಎ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯು ಸ್ವಂತಿಕೆ, ವಸ್ತುನಿಷ್ಠತೆ, ಉಪಯುಕ್ತತೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದಂತೆ ಅತ್ಯುತ್ತಮ ಪೋಸ್ಟರ್‌ಗಳ ಮೌಲ್ಯಮಾಪನ ಮಾಡುತ್ತದೆ. ಭೌತ ಮತ್ತು ಗಣಿತ ವಿಜ್ಞಾನಗಳು; ರಾಸಾಯನಿಕ ವಿಜ್ಞಾನಗಳು; ಜೀವ ವಿಜ್ಞಾನಗಳು; ಅಂತರ್‌ಶಿಸ್ತೀಯ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ವಿಜ್ಞಾನಗಳಂತಹ ಪ್ರತಿ ವಿಭಾಗದಲ್ಲೂ ನಗದು ಬಹುಮಾನಗಳನ್ನು ನೀಡಲಾಗುವುದು (ಪ್ರಥಮ ಬಹುಮಾನ: ರೂ. 15,000/-; ಎರಡನೇ ಬಹುಮಾನ: ರೂ. 10,000/-; ಮತ್ತು ಎರಡು ಸಮಾಧಾನಕರ ಬಹುಮಾನಗಳು: ತಲಾ ರೂ. 5,000).

ನಿರೀಕ್ಷಿತ ಫಲಿತಾಂಶಗಳು

  • ಬೋಧಕ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಆಸಕ್ತರು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಮುನ್ನಡೆಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ
  • ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆ ಮುಂದುವರಿಸಲು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು
  • ಆಧುನಿಕ ಜಗತ್ತನ್ನು ಅಭಿವೃದ್ಧಿಪಡಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದು
  • ಉದಯೋನ್ಮುಖ ಮತ್ತು ಮುಂಚೂಣಿ ತಂತ್ರಜ್ಞಾನಗಳು ಮತ್ತು ಸಂಶೋಧನೆಯಲ್ಲಿನ ಹೊಸ ಪ್ರವೃತ್ತಿಗಳ ಬಗ್ಗೆ ಜಾಗೃತಿ ಮೂಡುವುದು
  • ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುವುದು ಹಾಗೂ ಜ್ಞಾನಾಧಾರಿತ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುವುದು
Copyright © 2019. Karnataka Science and Technology Academy. All rights reserved.