ವಿಜ್ಞಾನ ಸಾಕ್ಷರತೆ ಮತ್ತು ವಿಜ್ಞಾನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಅಕಾಡೆಮಿಯ ವತಿಯಿಂದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಲಿಖಿತ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
ಕಾರ್ಯಕ್ರಮ
- ಪ್ರಬಂಧ ಬರವಣಿಗೆಯ ಮೂಲಕ ಬರವಣಿಗೆಯ ಕೌಶಲ್ಯ ಮತ್ತು ಸೃಜನಶೀಲತೆಯ ಕೌಶಲ್ಯಗಳನ್ನು ಉತ್ತೇಜಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಸ್ಪರ್ಧಿಗಳಲ್ಲಿ ತ್ವರಿತವಾಗಿ ಯೋಚಿಸುವ ಮತ್ತು ಉತ್ತಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಈ ಸ್ಪರ್ಧೆಯು ಹೊರತರುತ್ತದೆ. ಉತ್ತಮ ಬರವಣಿಗೆ ಶೈಲಿಯು ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿರುತ್ತದೆ
- ಪ್ರಬಂಧ ಬರವಣಿಗೆಯು ನಿರ್ಣಾಯಕ ಚಿಂತನೆ ಮತ್ತು ಪ್ರತಿಫಲನಾತ್ಮಕ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ವಾದಗಳನ್ನು ಪರಾಮರ್ಶಿಸಿ ತಮ್ಮ ದೃಷ್ಟಿಕೋನವನ್ನು ಹೆಚ್ಚು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ನಿಲುವುಗಳನ್ನು ತೆಗೆದುಕೊಳ್ಳುವತ್ತ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆಯ ಸವಾಲನ್ನು ಎದುರಿಸುತ್ತಾರೆ
- ಪ್ರಬಂಧಗಳು ನೈಜವಾಗಿರಬೇಕು, ಈ ಮೊದಲು ಎಲ್ಲಿಯೂ ಪ್ರಕಟಿಸಿರಬಾರದು ಅಥವಾ ಪ್ರಸ್ತುತಿ ಪಡಿಸಿರಬಾರದು ಹಾಗೂ 10 ಪುಟಗಳಿಗೆ ಮೀರದಂತೆ ಅಕಾಡೆಮಿ ಸೂಚಿಸಿದ ನಮೂನೆಯಲ್ಲಿರಬೇಕು.
- ಪ್ರಬಂಧದ ಜೊತೆಗೆ ಲೇಖಕರ ವಿವರಗಳನ್ನು ಒಂದು ಪ್ರತ್ಯೇಕ ಪುಟದಲ್ಲಿ ಸ್ಪಷ್ಟವಾಗಿ ನೀಡುವುದು. ಯಾವುದೇ ಪತ್ರವ್ಯವಹಾರಕ್ಕೆ ಉತ್ತೇಜನವಿಲ್ಲ
- ಮೊದಲ ಬಹುಮಾನ ರೂ. 10,000/-, ದ್ವಿತೀಯ ಬಹುಮಾನ ರೂ. 7,500/- ಹಾಗೂ ತೃತೀಯ ಬಹುಮಾನ ರೂ. 5,000/-. ಕನ್ನಡ ಮತ್ತು ಇಂಗ್ಲೀಷ್ ಪ್ರಬಂಧಗಳಿಗೆ ಪ್ರತ್ಯೇಕ ಬಹುಮಾನ
ಅರ್ಹತೆ
- ಪ್ರೌಢಶಾಲಾ ವಿದ್ಯಾರ್ಥಿಗಳು
- ಪದವಿಪೂರ್ವ ವಿದ್ಯಾರ್ಥಿಗಳು: ಪದವಿಪೂರ್ವ ಕೋರ್ಸ್ ಗೆ ಸೇರ್ಪಡೆಯಾಗಿರುವ ಮತ್ತು ಕೋರ್ಸ್ ಇನ್ನೂ ಪೂರ್ಣಗೊಂಡಿಲ್ಲದ ವಿದ್ಯಾರ್ಥಿಗಳು; ವಯಸ್ಸು 22 ವರ್ಷಗಳನ್ನು ಮೀರಿರಬಾರದು
- ಸ್ನಾತಕೋತ್ತರ ವಿದ್ಯಾರ್ಥಿಗಳು: ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಸೇರ್ಪಡೆಯಾಗಿರುವ ಮತ್ತು ಕೋರ್ಸ್ ಇನ್ನೂ ಪೂರ್ಣಗೊಂಡಿಲ್ಲದ ವಿದ್ಯಾರ್ಥಿಗಳು; ವಯಸ್ಸು 24 ವರ್ಷಗಳನ್ನು ಮೀರಿರಬಾರದು
- ಜನಸಾಮಾನ್ಯರು: ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಆಸಕ್ತಿ ಹೊಂದಿರುವವರು; ವಯಸ್ಸು 50 ವರ್ಷಗಳನ್ನು ಮೀರಿರಬಾರದು
ಮೌಲ್ಯಮಾಪನ & ಪ್ರಶಸ್ತಿಗಳು
- ಪ್ರಬಂಧಗಳನ್ನು ಸ್ಪಷ್ಟತೆ ಮತ್ತು ವಿಷಯಕ್ಕೆ ಸಂಬಂಧಿಸಿದ ಮಾನದಂಡಗಳೊಂದಿಗೆ, ಪ್ರಬಂಧಗಳ ನೈಜತೆ ಮತ್ತು ಪ್ರಸ್ತುತತೆ; ರಚನೆ ಮತ್ತು ಚಿಂತನೆಗಳ ಹರಿವು; ಸಂದೇಶದ ಸಂವಹನ ಮತ್ತು ಪರಿಣಾಮಕಾರಿತ್ವದ ಅಂಶಗಳ ಮೇಲೆ ಪ್ರತಿಷ್ಠಿತ ತಜ್ಞರ ಸಮಿತಿಯ ಮೂಲಕ ಮೌಲ್ಯಮಾಪನ ಮಾಡಿಸಲಾಗುವುದು
- ಪ್ರಬಂಧಗಳನ್ನು ಸ್ವೀಕರಿಸಲು ಕೊನೆಯ ದಿನಾಂಕದಿಂದ ಮೂರು ತಿಂಗಳೊಳಗಾಗಿ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಪ್ರಶಸ್ತಿಗಳ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
- ಅಕಾಡೆಮಿಯು ಪ್ರಶಸ್ತಿಗೆ ಸಲ್ಲಿಸಿದ ಪ್ರಬಂಧಗಳ ಹಕ್ಕುಸ್ವಾಮ್ಯವನ್ನು ಹೊಂದಿರುತ್ತದೆ ಮತ್ತು ಪ್ರಶಸ್ತಿ ವಿಜೇತ ಪ್ರಬಂಧಗಳನ್ನು ಸಂಪಾದಕೀಯ ಸಮಿತಿಯ ವಿವೇಚನೆಯ ಮೇರೆಗೆ ಅಕಾಡೆಮಿಯ ಇ-ನ್ಯೂಸ್ ಲೆಟರ್ ನಲ್ಲಿ ಪ್ರಕಟಿಸಲಾಗುತ್ತದೆ
- ಸ್ಪರ್ಧೆಗೆ ಯಾವುದೇ ಪ್ರಬಂಧಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಅಕಾಡೆಮಿಯು ಹೋದಿರುತ್ತದೆ ಮತ್ತು ಈ ವಿಷಯದಲ್ಲಿ ಅಕಾಡೆಮಿಯ ನಿರ್ಧಾರಗಳು ಅಂತಿಮ ಮತ್ತು ಬದ್ಧವಾಗಿರುತ್ತದೆ.
