ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ತರಬೇತುದಾರರ ತರಬೇತಿ ಕಾರ್ಯಕ್ರಮ

ಅಕಾಡೆಮಿಯ ವತಿಯಿಂದ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳ ಮೇಲೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.

ಉದ್ದೇಶಗಳು

  • ಕರ್ನಾಟಕದ ಗ್ರಾಮೀಣ ಪ್ರದೇಶದ ಶಿಕ್ಷಕರು ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳಲ್ಲಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
  • ವಿಜ್ಞಾನ ಬೋಧನೆ ಮತ್ತು ಸಂವಹನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು
  • ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸಂಪನ್ಮೂಲ ತಜ್ಞರು ಮತ್ತು ಶಿಕ್ಷಕರ ಜಾಲ ವ್ಯವಸ್ಥೆಯನ್ನು ಸ್ಥಾಪಿಸುವುದು
  • ಗ್ರಾಮೀಣ ಪ್ರದೇಶಗಳಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಲು ಮಾರ್ಗದರ್ಶಕ ವ್ಯವಸ್ಥೆಯನ್ನು ರೂಪಿಸುವುದು

ಸಂಪನ್ಮೂಲ ತಜ್ಞರು

  • ಈ ಕಾರ್ಯಾಗಾರವನ್ನು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಶಾಲೆಗಳು/ಸಂಸ್ಥೆಗಳು ನಡೆಸಬಹುದಾಗಿದ್ದು, ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ.
  • ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳಲ್ಲಿ ಬೋಧಿಸುತ್ತಿರುವ ಗ್ರಾಮೀಣ ಪ್ರದೇಶದ ಶಿಕ್ಷಕರನ್ನು ಗುರುತಿಸುವುದು, ಒಂದು ಬಾರಿಗೆ ಒಂದು ಜಿಲ್ಲಾ
  • ಮಾಹಿತಿ ಮತ್ತು ಸಂವಹನ ಸಾಧನಗಳ ಮೂಲಕ ಕನ್ನಡ ಮಾಧ್ಯಮದಲ್ಲಿ ಸಂಪನ್ಮೂಲ ತಜ್ಞರು, ಶಿಕ್ಷಣ ತಜ್ಞರು, ನುರಿತ ಶಿಕ್ಷಕರಿಂದ ತಾಲೂಕು ಮಟ್ಟದ ಶಾಲೆಯಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ನಡೆಸುವುದು.
  • ಆಯಾ ಕ್ಷೇತ್ರಗಳಲ್ಲಿ 10-15 ಸಂಪನ್ಮೂಲ ತಜ್ಞರನ್ನು ಗುರುತಿಸಿ, ಅವರಲ್ಲಿ 8 ತಜ್ಞರನ್ನು ಅವರ ಲಭ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು.
  • ಒಂದು ಜಿಲ್ಲೆಯಿಂದ ಒಂದು ಬಾರಿಗೆ 50 ಸಂಖ್ಯೆಗೆ ಮೀರದಂತೆ ಗ್ರಾಮೀಣ ಪ್ರದೇಶದ ಆಯ್ದ ಶಾಲೆಗಳ ಶಿಕ್ಷಕರು ಭಾಗವಹಿಸುವರು

ಮೌಲ್ಯಮಾಪನ

  • ಕಾರ್ಯಾಗಾರಗಳ ಕೊನೆಯಲ್ಲಿ ಸಂಪನ್ಮೂಲ ತಜ್ಞರಿಂದ ಪಡೆದ (ತಲಾ 8-10 ಪ್ರಶ್ನೆಗಳು) ಬಹು ಆಯ್ಕೆ ರಸಪ್ರಶ್ನೆಯೊಂದಿಗೆ ಒಂದು ಗಂಟೆ ಕಾಲದ ಪರೀಕ್ಷೆಯಿಂದ ಶಿಭಿರಾರ್ಥಿಗಳ ಮೌಲ್ಯಮಾಪನ
  • ಅಂಕಗಳ ದಾರದ ಮೇಲೆ ಆಯ್ಕೆ ಮಾಡಿದ ಮೊದಲ ನಾಲ್ಕು ಶಿಕ್ಷಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ; ಪ್ರಥಮ: ರೂ 3,000/-; ದ್ವಿತೀಯ: ರೂ 2,000/-; ತೃತೀಯ (ಇಬ್ಬರಿಗೆ): ತಲಾ ರೂ 1,000/-
  • ಉಪನ್ಯಾಸ ಮಾಲೆ/ಕಾರ್ಯಾಗಾರದಲ್ಲಿ ಭಾಗವಹಿಸಿದ್ದರ ಪ್ರಮಾಣಪತ್ರವನ್ನು ಪಡೆಯಲು ಕನಿಷ್ಠ ಅಂಕಗಳನ್ನು ಪಡೆಯಬೇಕು.

ಆಡಳಿತ / ಆಯವ್ಯಯ

  • ಶಾಲೆಗಳಲ್ಲಿ/ರೋಟರಿ ಕ್ಲಬ್ ಅಥವಾ ಅದೇ ರೀತಿಯ ಇತರೆ ಸಂಸ್ಥೆಗಳಲ್ಲಿ 2 ದಿನಗಳ ಕಾರ್ಯಾಗಾರಕ್ಕೆ ರೂ. 1.25 ಲಕ್ಷ (ಅತಿಥೇಯ ಸಂಸ್ಥೆಯ ಕೊಡುಗೆ ನಿರೀಕ್ಷಿಸಿದೆ) ಸಂಪನ್ಮೂಲ ತಜ್ಞರ ಗೌರವಧನ, ಲೇಖನ ಸಾಮಾರ್ಗಿ, ಪ್ರಯಾಣ, ಊಟ-ಉಪಹಾರ, ಬಹುಮಾನ, ಆಡಿಟ್ ಶುಲ್ಕ, ಇತ್ಯಾದಿ ಸೇರಿ.
  • ಕಾರ್ಯಕ್ರಮದ ನೋಡಲ್ ಅಧಿಕಾರಿಯು ಕಾರ್ಯಕ್ರಮ ವೇಳಾಪಟ್ಟಿ ಮತ್ತು ಸಂಪನ್ಮೂಲ ತಜ್ಞರ ಪಟ್ಟಿಯನ್ನು ಅಕಾಡೆಮಿಯಿಂದ ಅನುಮೋದನೆಯನ್ನು ಪಡೆಯಬೇಕು. ಒಂದು ಉಪನ್ಯಾಸ 90 ನಿಮಿಷಗಳು ಮತ್ತು ರೂ. 2,000/- ಗೌರವ ಸಂಭಾವನೆ. ಒಂದು ಕಾರ್ಯಕ್ರಮದಲ್ಲಿ ಒಬ್ಬ ತಜ್ಞರು ಗರಿಷ್ಠ ಎರಡು ಉಪನ್ಯಾಸಗಳನ್ನು ನೀಡಬಹುದು. ನೋಡಲ್ ಅಧಿಕಾರಿಗೆ ರೂ 5,000/- ಗಳ ಗೌರವ ಸಂಭಾವನೆ
  • ಕಾರ್ಯಕ್ರಮ ಪೂರ್ಣಗೊಂಡ ನಂತರ ನೋಂದಾಯಿತ ಲೆಕ್ಕ ಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪರಿಶೋಧನೆಯ ವರದಿಯನ್ನು ಸೂಕ್ತ ಛಾಯಾಚಿತ್ರಗಳು ಮತ್ತು ಕಾರ್ಯಕ್ರಮ ವರದಿಯ ಸಮೇತ ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಂದ ಪ್ರತಿಕ್ರಿಯೆಗಳನ್ನು ಸಹ ಒದಗಿಸಬಹುದು
  • ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು, ಅಕಾಡೆಮಿಯ ಪೂರ್ವಾನುಮತಿಯೊಂದಿಗೆ, ಆತಿಥೇಯ ಸಂಸ್ಥೆಗಳು ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬಹುದಾಗಿದೆ.
  • ಅಕಾಡೆಮಿಯು ಕಾರ್ಯಕ್ರಮವನ್ನು ಬಾಹ್ಯ ಸಂಸ್ಥೆಯಿಂದ ಮೌಲ್ಯಮಾಪನವನ್ನು ಕೈಗೊಳ್ಳುವುದು, ಆ ಸಮಯದಲ್ಲಿ, ಆತಿಥೇಯ ಸಂಸ್ಥೆಗಳು/ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಅಗತ್ಯ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಮಾಹಿತಿ ಒದಗಿಸುವುದು
Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content