ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರ ಲೇಖನಿಯಿಂದ: ಡಿಸೆಂಬರ್ 31, 2020

1 min read

ಕೋವಿಡ್-19 ಪಿಡುಗಿನ ವರ್ಷವೆಂದೇ ಕುಖ್ಯಾತಿಗೊಳಗಾದ 2020ರ ಅಂತ್ಯದಲ್ಲಿ ನಾವಿದ್ದೇವೆ.  ‘ಸೋಂಕಿನ ಪತ್ತೆಯಿಂದ ಚಿಕೆತ್ಸೆವರೆವಿಗೂ’ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯ ಮತ್ತು ಪರಿಹಾರ ಸಹ ಸುವ್ಯಕ್ತವಾಯಿತು, ಇದು ಹೊಸ ಮಾರ್ಗಗಳನ್ನು ಕಂಡುಹಿಡಿದು, ಸವಾಲುಗಳನ್ನು ಎದುರಿಸಿದ ವರ್ಷವೂ ಸಹ ಆಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ  (NEP-2020) ಇದೇ ವರ್ಷ ಬಿಡುಗಡೆಯಾಗಿ, ಹೊಸ ಸಾಧ್ಯತೆಗಳು ಮತ್ತು ಅವಕಾಶಗಳಿಗಾಗಿ ದೇಶಾದ್ಯಂತ ವ್ಯಾಪಕ  ಚರ್ಚೆಗಳು ನಡೆದವು. ಇದಲ್ಲದೆ, ಬಹುಆಸ್ಥೆದಾರರ ಸಮಾಲೋಚನೆ ಗಳೊಂದಿಗೆ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆಯ ನೀತಿಯನ್ನೂ (STIP-2020) ಸಹ ರೂಪಿಸಲಾಗಿದೆ.

ಪ್ರತಿಯೊಂದು ಸಂಸ್ಥೆಯು ತನ್ನ ಆಧ್ಯಾದೇಶ, ಸಂಪನ್ಮೂಲಗಳು, ಅಗತ್ಯಗಳು ಮತ್ತು ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು ಪ್ರಸ್ತುತತೆಯ ಜೊತೆಗೆ ಉತ್ಕೃಷ್ಟತೆಯನ್ನು ಸಾಧಿಸಲು ಹೊಸ ದಿಗಂತಗಳನ್ನು ಎದುರು ನೋಡುತ್ತದೆ, ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಹಾಕಿಕೊಂಡಿರುವ ಕಾಲಮಿತಿಗೆ ಇನ್ನೂ ಒಂದು ದಶಕವಿದ್ದು,  ಪ್ರಮುಖ ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ಪರಿಸ್ಥತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಆಶೋತ್ತರಗಳನ್ನು ಸಾಕಾರಗೊಳಿಸುವತ್ತ ಅಕಾಡೆಮಿಯು ವಿಷನ್ ಅನ್ನು ರೂಪಿಸಿಕೊಳ್ಳಲು ಇದು ಸದಾವಕಾಶ ಅನಿಸಿತು.

ಅದರಂತೆ, ಅಕಾಡೆಮಿಯ ವಿಷನ್-2030 ರೂಪಿಸಿ ಹೊರತರಲಾಗಿದ್ದು, ಇದರ ಗುರಿಗಳು: ವಿಜ್ಞಾನವನ್ನು ಬಾಹ್ಯಕ್ಕಿಂತ ಅಂತರ್ಗತವಾಗಿ ಅಳವಡಿಸಿಕೊಳ್ಳುವ ಅಪೇಕ್ಷಿತೆಯನ್ನು ಸಮಾಜದ ಎಲ್ಲಾ ಸ್ತರಗಳ ಆಸ್ಥೆದಾರರಲ್ಲಿ ತರುವುದು; ಗ್ರಾಮೀಣ ಕರ್ನಾಟಕದಲ್ಲಿ ವೈಜ್ಞಾನಿಕ ಸಾಕ್ಷರತೆ ಮತ್ತು ತಾಂತ್ರಿಕ ಸಾಮರ್ಥ್ಯ ವರ್ಥನೆ; ದೈನಂದಿಕ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಉಪಯೋಗಗಳನ್ನು ತಾವಾಗಿಯೇ ಅನುಭವಿಸಲು ಅವಕಾಶ ಕಲ್ಪಿಸುವುದು; ರಾಜ್ಯದಲ್ಲಿ ಶ್ರೇಷ್ಠ ಸಾಂಸ್ಥಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಮನ್ವಯಗೊಳಿಸುವುದು; ಸಂಶೋಧನಾ ಪ್ರಕಟಣೆಗಳು ಮತ್ತು ಸಾರ್ವಜನಿಕ ಒಳಿತುಗಳನ್ನು ಒಳಗೊಂಡಂತೆ ವಿಜ್ಞಾನದಲ್ಲಿ ರಾಜ್ಯ ಮುಂದಾಳತ್ವ ವಹಿಸಲು ಸಮರ್ಥಗೊಳಿಸುವುದು; ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಆಧಾರಿತ ಉದ್ಯಮಗಳು ಮತ್ತು ಸಹಭಾಗಿತ್ವಗಳನ್ನು ಸ್ಥಾಪಿಸುವುದು; ಅಂತರ ಶಿಕ್ಷಣ ಶಾಖೀಯ ಒಕ್ಕೂಟ ಮತ್ತು ಜಾಲ ವ್ಯೆವಸ್ಥೆಯ ನಿರ್ಮಾಣ; ಸಾರ್ವಜನಿಕ ಮತ್ತು ಕಾರ್ಪೊರೇಟ್ ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸಲು ನೀತಿಗಳು.

ಇದು ಮುಂಬರುವ ದಿನಗಳಲ್ಲಿ ಅಕಾಡೆಮಿಯ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಉಲ್ಲೇಖದ ದಾಖಲೆಯಾಗಲಿದೆ.

– ಎಸ್. ಅಯ್ಯಪ್ಪನ್

ಡಿಸೆಂಬರ್ 31, 2020

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content