ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಆನ್ಲೈನ್ ತರಬೇತಿ ಕಾರ್ಯಕ್ರಮ-ಜೂನ್ 10, 2021; ಬೆಳಗ್ಗೆ 10:30ರಿಂದ

ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌, ಚಾಮರಾಜನಗರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ ಇವರ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಆನ್ಲೈನ್ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಉದ್ಘಾಟನಾ ಕಾರ್ಯಕ್ರಮ

ದಿನಾಂಕ:10/06/2021, ಗುರುವಾರ ಬೆಳಗ್ಗೆ 10.30

ಉದ್ಘಾಟನೆ

ಪದ್ಮಶ್ರೀ ಪುರಸ್ಕೃತ ಡಾ . ಎ. ಎಸ್. ಕಿರಣ್ ಕುಮಾರ್

ಮಾಜಿ ಅಧ್ಯಕ್ಷರು ಇಸ್ರೋ  ಹಾಗೂ ಸದಸ್ಯರು ಭಾರತೀಯ ಬಾಹ್ಯಾಕಾಶ ಆಯೋಗ, ಭಾರತ ಸರ್ಕಾರ

ಗೌರವ ಉಪಸ್ಥಿತಿ

ಪ್ರೊ. ಎಸ್. ಅಯ್ಯಪ್ಪನ್

ನಿವೃತ್ತ ಮಹಾ ನಿರ್ದೇಶಕರು, ಐಸಿಎಆರ್, ಭಾರತ ಸರ್ಕಾರ
ಕುಲಾಧಿಪತಿಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ, ಇಂಪಾಲ ಹಾಗೂ ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರ

ಕಾರ್ಯಕ್ರಮದ  ಧ್ಯೇಯೋದ್ದೇಶಗಳು

  • ವಿಷಯ  ಪರಿಣಿತರಿಂದ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಒಳಗೊಂಡಂತೆ ಆನ್ಲೈನ್ ತರಗತಿಗಳನ್ನು ನಡೆಸುವುದು.
  • ಖ್ಯಾತ ವಿಜ್ಞಾನಿಗಳಿಂದ ಉಪನ್ಯಾಸಗಳನ್ನು ಆಯೋಜಿಸುವುದು.
  • ವೈಜ್ಞಾನಿಕ ಪ್ರಯೋಗಗಳು ಮತ್ತು ಗಣಿತ ಚಟುವಟಿಕೆಗಳ ಬಗೆಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು
  • ಆನ್ಲೈನ್ ಮುಖಾಂತರ ಅನೇಕ ಸ್ಪರ್ಧೆಗಳನ್ನು ಆಯೋಜಿಸುವುದು ಹಾಗೂ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ  ಮಾಡುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

  • ಶ್ರೀ ಅಭಿಷೇಕ್ ಎ ಎಸ್
  • ಸಂಸ್ಥಾಪಕ ಕಾರ್ಯದರ್ಶಿಗಳು
  • ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌, ಚಾಮರಾಜನಗರ
  • ಮೊ: 9742965065

You may have missed

Copyright © 2019. Karnataka Science and Technology Academy. All rights reserved.