2020-21ನೇ ಸಾಲಿನ ಅಕಾಡೆಮಿಯ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಪ್ರಕಟ
ಡಾ. ವಸಂತ್ ಕುಮಾರ್ ತಿಮಕಾಪುರ ರವರು ರಚಿಸಿರುವ ‘ಕೃಷಿ ಲೋಕದೊಳಗೆ’ ಎಂಬ ಪುಸ್ತಕಕವನ್ನು ಕೃಷಿ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಕೇಶವ್ ಎಚ್. ಕೊರ್ಸೆ ರವರು ರಚಿಸಿರುವ ‘ಸಹ್ಯಾದ್ರಿ ಕಥನ’ ಎಂಬ ಪುಸ್ತಕವನ್ನು ಹಾಗೂ ಡಾ. ಬಿ. ರೇವತಿ ನಂದನ್ ರವರು ರಚಿಸಿರುವ ‘ತೋಟದ ಲೋಕದ ಪಾಠಗಳು’ ಎಂಬ ಪುಸ್ತಕವನ್ನು ವಿಜ್ಞಾನ & ತಂತ್ರಜ್ಞಾನ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಕಿರಣ್ ವಿ. ಎಸ್ ರವರು ರಚಿಸಿರುವ ‘ಸೆರೆಂಡಿಪಿಟಿ’ ಎಂಬ ಪುಸ್ತಕವನ್ನು ವೈದ್ಯಕೀಯ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.