ಖ್ಯಾತ ನಟರಾದ ಶ್ರೀ ಸುಂದರ್ ಮತ್ತು ಶ್ರೀಮತಿ ರೋಹಿಣಿ ರಂಘುನಂದನ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಅಕಾಡೆಮಿಯ ಸಿ.ಇ.ಒ. ಡಾ. ಎ.ಎಂ. ರಮೇಶ್, ಕಾರ್ಯಕ್ರಮದ ಸಂಯೋಜಕರಾದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಆನಂದ್ ಆರ್, ಆಡಳೀತಾಧಿಕಾರಿ ಶ್ರೀ ಮಹದೇವೇಗೌಡ ಮತ್ತು ವೈಜ್ಞಾನಿಕ ಅಧಿಕಾರಿ ಶ್ರೀ ಶ್ರೀನಿವಾಸ ಉಪಸ್ಥಿತರಿದ್ದರು

ಅಕಾಡೆಮಿಯು ಪದವಿ ವಿದ್ಯಾರ್ಥಿಗಳಿಗಾಗಿ ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ ರಸಪ್ರಶ್ನೆ, ಗಣಿತ ಮಾಡಲ್, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಮೊದಲಿಗೆ ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ವಿಭಾಗ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ, ನಂತರ ರಾಜ್ಯ ಮಟ್ಟದ ಸ್ಪರ್ಧೆಯನ್ನು 2020ರ ಮಾರ್ಚ್ 6-7 ರಂದು ನಡೆಸಲಾಯಿತು.

ರಾಜ್ಯ ಮಟ್ಟದ ಸ್ಪರ್ಧೆಗಳನ್ನು ರಂಗಮಂದಿರ, ಕಿರುತೆರೆ ಹಾಗೂ ಬೆಳ್ಳಿತೆರೆಯ ಖ್ಯಾತ ನಟರಾದ ಶ್ರೀ ಸುಂದರ್ ವೀಣಾ ಮತ್ತು ಶ್ರೀಮತಿ ರೋಹಿಣಿ ರಂಘುನಂದನ್ ರವರು ಉದ್ಘಾಟಿಸಿದರು

ಮಾರ್ಚ್ 6 ರಂದು ವಿಜ್ಞಾನ ನಾಟಕ, ಗಣಿತ ಮಾಡಲ್ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.

ಮಾರ್ಚ್ 7 ರಂದು ಗಣಿತ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ರಾಜ್ಯದ ನಾಲ್ಕು ವಿಭಾಗಗಳಿಂದ 162 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು

ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರು

ವಿಜ್ಞಾನ ನಾಟಕ

1. ಮೊದಲನೇ ಬಹುಮಾನ : ಬೆಳಕಿನೊಂದು ಕಿರಣ – ಮೇರಿ ಕ್ಯೂರಿ

ಕಾರ್ತಿಕ್ ಮತ್ತು ತಂಡ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ

2. ಎರಡನೇ ಬಹುಮಾನ : ಸ್ವಚ್ಚತೆಯ ಹುಚ್ಚು

ಕುಶಲ್ ಮತ್ತು ತಂಡ, ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆ,ಕೆಲಗೇರಿ, ಧಾರವಾಡ

3. ಮೂರನೇ ಬಹುಮಾನ : We ಜ್ಞಾನ

ರೂಪೇಶ್ ಮತ್ತು ತಂಡ, ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ

ಅತ್ಯುತ್ತಮ ನಿರ್ದೇಶನ

ಅತ್ಯುತ್ತಮ ನಟ/ನಟಿ

ಅತ್ಯುತ್ತಮ ನಾಟಕ ರಚನೆ/ಸ್ಕ್ರಿಪ್ಟ್

ಗಣಿತ ರಸಪ್ರಶ್ನೆ

ಗಣಿತ ಮಾಡಲ್

ಚಿತ್ರಕಲೆ/ಡ್ರಾಯಿಂಗ್

ಪ್ರಬಂಧ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content