ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ರಾಷ್ಟ್ರೀಯ ಸಮ್ಮೇಳನ: ಆರೋಗ್ಯ ಮತ್ತು ಪೌಷ್ಟಿಕತೆಗಾಗಿ ಹಣ್ಣುಗಳು ಮತ್ತು ತರಕಾರಿಗಳು (ಎಫ್ ವಿಎಚ್ ಎನ್ 2021) ನವೆಂಬರ್ 08 – 10, 2021

1 min read

ಹಣ್ಣು ಮತ್ತು ತರಕಾರಿಗಳ ಅಂತಾರಾಷ್ಟ್ರೀಯ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ  (ಕೆ.ಎಸ್.ಟಿ.ಎ)ಯು  ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ನವದೆಹಲಿಯ ವಿಜ್ಞಾನ ಪ್ರಸಾರ್ ಇವರ ಸಹಯೋಗದಲ್ಲಿ 2021ರ ನವೆಂಬರ್ 08 ರಿಂದ 10ರವರೆಗೆ ‘ಆರೋಗ್ಯ ಮತ್ತು ಪೌಷ್ಟಿಕತೆಗಾಗಿ ಹಣ್ಣುಗಳು ಮತ್ತು ತರಕಾರಿಗಳು  (ಎಫ್.ವಿ.ಎಚ್.ಎನ್. 2021)’  ಎಂಬ ಶೀರ್ಷಿಕೆಯ ರಾಷ್ಟ್ರೀಯ ಸಮ್ಮೇಳನವನ್ನು  ಆಯೋಜಿಸುತ್ತಿದೆ.

ಸಮ್ಮೇಳನದಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಖ್ಯಾತ ವಿಜ್ಞಾನಿಗಳು ಮತ್ತು  ಕೈಗಾರಿಕೋದ್ಯಮಿಗಳಿಂದ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳವು ಎರಡು ದಿನಗಳ ತಾಂತ್ರಿಕ ಅಧಿವೇಶನಗಳನ್ನು ಹೊಂದಿದ್ದು, ಮೂರನೇ ದಿನ ಪ್ರಗತಿಪರ ರೈತರು ಮತ್ತು ವಿದ್ಯಾರ್ಥಿಗಳಿಂದ ಪ್ರಸ್ತುತಿಗಳನ್ನು ಹೊಂದಿರುವ ವಿಶೇಷ ಅಧಿವೇಶನವನ್ನು ಸಹ ಒಳಗೊಂಡಿರುತ್ತದೆ. ಈ ಸಮ್ಮೇಳನವು ಆನ್ ಲೈನ್ ಮೂಲಕ ನಡೆಯಲಿದ್ದು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಎನ್.ಜಿ.ಒ. ಗಳ ಪ್ರತಿನಿಧಿಗಳು ಮತ್ತು ಸಾಮಾನ್ಯ ಜನರು ಭಾಗವಹಿಸಬಹುದಾಗಿದೆ.

schedule-Final

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content