ಅತ್ಯುತ್ತಮ ಸ್ಟೀಮ್ ಸಂವಹನಕಾರರಿಗೆ ಕೆ.ಎಸ್.ಟಿ.ಎ. ವಾರ್ಷಿಕ ಬಹುಮಾನ (ದಿವ್ಯಾಂಗ)
1 min readವಿಶೇಷ ಚೇತನರ ಸಬಲೀಕರಣಕ್ಕಾಗಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ (ಸ್ಟೀಮ್) ಸಂವಹನ ಕ್ಷೇತ್ರದಲ್ಲಿ ವಿಶೇಷ ಚೇತನರ ಪ್ರಯತ್ನಗಳನ್ನು ಗುರುತಿಸುವ ಉದ್ದೇಶದಿಂದ ‘ಅತ್ಯುತ್ತಮ ಸ್ಟೀಮ್ ಸಂವಹನಕಾರರಿಗೆ ಕೆ.ಎಸ್.ಟಿ.ಎ. ವಾರ್ಷಿಕ ಬಹುಮಾನ (ದಿವ್ಯಾಂಗ)‘ ನೀಡಲಾಗುತ್ತಿದೆ.
Flyer-kn-1ಕೆ.ಎಸ್.ಟಿ.ಎ ವಾರ್ಷಿಕ ಬಹುಮಾನ
ಸ್ಟೀಮ್ ಸಂವಹನ ಕ್ಷೇತ್ರಗಳಲ್ಲಿ ದಿವ್ಯಾಂಗ ವ್ಯಕ್ತಿಯ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಪರಿಣಾಮಕಾರಿ ಸ್ಟೀಮ್ ಸಂವಹಕ್ಕಾಗಿ ಮಾಡಿದ ನವೀನ ಪ್ರಯತ್ನಗಳು ಯಾವುದೇ ರೂಪದಲ್ಲಿರಬಹುದಾಗಿದೆ. ತಜ್ಞ ಸಮಿತಿಯ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗುತ್ತಿದೆ ಮತ್ತು ರೂ.10,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತದೆ. ಪ್ರಶಸ್ತಿ ಆಯ್ಕೆಯಾದವರು ತಾವು ಮಾಡಿದ ಪ್ರಯತ್ನಗಳನ್ನು ಉಪನ್ಯಾಸ / ಪ್ರದರ್ಶನ / ಪ್ರಸ್ತುತಿಯ ರೂಪದಲ್ಲಿ ಪ್ರಸ್ತುತಪಡಿಸಬೇಕು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು (ಎನ್.ಸಿ.ಎಸ್.ಟಿ.ಸಿ) ಅಕಾಡೆಮಿಗೆ “ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನದಲ್ಲಿ ಅತ್ಯುತ್ತಮ ಪ್ರಯತ್ನಗಳು 2022” ಎಂಬ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿಜ್ಞಾನ ಶಿಕ್ಷಣ ಮತ್ತು ಸಂವಹನಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಅಕಾಡೆಮಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ರೂ.5.00 ಲಕ್ಷ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಅಕಾಡೆಮಿಗೆ ದೊರಕಿರುವ ಈ ನಗದು ಪುರಸ್ಕಾರವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇರಿಸಿ ಅದರಿಂದ ಬಂದ ವಾರ್ಷಿಕ ಬಡ್ಡಿಯಿಂದ ಆಯ್ಕೆಯಾದ ವಿಶೇಷ ಚೇತನರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅರ್ಹತೆ
- ವಿಕಲಚೇತನರ ಹಕ್ಕುಗಳ (ಆರ್.ಪಿಡಬ್ಲ್ಯುಡಿ) ಕಾಯ್ದೆ, 2016 ರ ಅಡಿಯಲ್ಲಿ 21 ನಿರ್ದಿಷ್ಟ ಅಂಗವೈಕಲ್ಯಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರುವ ಎಲ್ಲಾ ವಿಕಲಚೇತನರು ಹಾಗೂ ಕರ್ನಾಟಕ ರಾಜ್ಯ ವಿಕಲ ಚೇತನರ ಹಕ್ಕುಗಳ ನಿಯಮ 2019 ರಂತೆ ಅರ್ಹರಾಗಿರುತ್ತಾರೆ
- ಮೇಲಿನ ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಿದ ವರ್ಗದಲ್ಲಿ 40% ಅಥವಾ ಅದಕ್ಕಿಂತ ಹೆಚ್ಚಿನ ಮಾನದಂಡದ ಅಂಗವೈಕಲ್ಯವನ್ನು ಹೊಂದಿರುವ ಯಾವುದೇ ವ್ಯಕ್ತಿ ಅರ್ಹರಾಗಿರುತ್ತಾರೆ
- ನಾಮನಿರ್ದೇಶಿತ/ ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟ ಸಂವಹನಕಾರ / ಪತ್ರಕರ್ತ / ಸಂಪಾದಕ / ವಿಜ್ಞಾನಿ / ತಂತ್ರಜ್ಞರಾಗಿರಬೇಕು ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಟೀಮ್ ಸಂವಹನ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿರಬೇಕು
- ನಾಮನಿರ್ದೇಶಿತರು ಹುಟ್ಟಿನಿಂದ ಅಥವಾ ವಾಸಸ್ಥಳ ಅಥವಾ ಸೇವೆಯ ಮೂಲಕ ಕರ್ನಾಟಕ ಮೂಲದವರಾಗಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
ನಾಮನಿರ್ದೇಶನ / ಅರ್ಜಿ: ಈ ಲಿಂಕ್ ಮೂಲಕ ನಾಮನಿರ್ದೇಶನ ಅರ್ಜಿ ಪಡೆಯಿರಿ
ಮಾನದಂಡ: ಈ ಲಿಂಕ್ ಮೂಲಕ ಪಡೆಯಿರಿ
ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ಪ್ರೊ. ಯು ಆರ್ ರಾವ್ ವಿಜ್ಞಾನ ಭವನ, ಮೆ. ಸಂದೀಪ್ ಉನ್ನೀಕೃಷ್ಣನ್ ರಸ್ತೆ,
ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ದ್ವಾರದ ಪಕ್ಕ, ದೊಡ್ಡ ಬೆಟ್ಟ ಹಳ್ಳಿ ಬಡಾವಣೆ
ವಿದ್ಯಾರಣ್ಯಪುರ ಅಂಚೆ, ಯಲಹಂಕ, ಬೆಂಗಳೂರು – 560097
ನಾಮನಿರ್ದೇಶನ / ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ: 28.01.2025