ಸುಶಾಸನ ಮಾಸಾಚರಣೆ: 2022ರ ಡಿಸೆಂಬರ್ ಮಾಹೆ
1 min readದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸ್ಮರಣಾರ್ಥ ಕರ್ನಾಟಕ ಸರ್ಕಾರವು 2022ರ ಡಿಸೆಂಬರ್ ಅನ್ನು ಸುಶಾಸನ ಮಾಸವಾಗಿ ಘೋಷಿಸಿದ್ದು, ಅಕಾಡೆಮಿ ವತಿಯಿಂದ ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
‘ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ’ ಪ್ರಬಂಧ ಸ್ಪರ್ಧೆಯ ಫಲಿತಾಂಶ
ಅಕಾಡೆಮಿಯ ವತಿಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆಗಳಿಂದ ಪ್ರಬಂಧಗಳನ್ನು ಕಳುಹಿಸಿಕೊಟ್ಟಿದ್ದರು. ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿರುವುದು ಬಹಳ ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ಅಕಾಡೆಮಿಯಿಂದ ಅಭಿನಂದನೆಗಳು.
ಅಕಾಡೆಮಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಲ್ಲಿಕೆಯಾದ ಎಲ್ಲಾ ಪ್ರಬಂಧಗಳನ್ನು ಪರಿಣಿತರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಪರಿಣಿತರು ವಿದ್ಯಾರ್ಥಿಗಳ ಪ್ರಯತ್ನವು ಶ್ಲಾಘನೀಯವಾಗಿದ್ದರೂ ಪ್ರಬಂಧಗಳು ತೃಪ್ತಿಕರವಾಗಿಲ್ಲವೆಂದು, ತುಲನಾತ್ಮಕವಾಗಿ ಉತ್ತಮವಾಗಿರುವ ಕನ್ನಡ ಮತ್ತು ಆಂಗ್ಲ ಭಾಷೆಯ ತಲಾ ನಾಲ್ಕು ಪ್ರಬಂಧಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಬಹುದೆಂದು ಅಭಿಪ್ರಾಯಪಟ್ಟಿರುತ್ತಾರೆ. ಅದರಂತೆ, ಅಕಾಡೆಮಿಯು ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಪ್ರೊತ್ಸಾಹ ನೀಡಲು ಈ ಕೆಳಕಂಡ ವಿದ್ಯಾರ್ಥಿಗಳ ಪ್ರಬಂಧಕ್ಕೆ ಪ್ರೊತ್ಸಾಹ ಧನವಾಗಿ ರೂ. 500/-ಗಳನ್ನು ಹಾಗೂ ಅಕಾಡೆಮಿಯ ‘ವಿಜ್ಞಾನ ಲೋಕ’ ಸಂಚಿಕೆಯ ಒಂದು ವಾರ್ಷದ ಚಂದಾದಾರಿಕೆಯನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಹೆಸರು | ಪ್ರಬಂಧದ ಭಾಷೆ | ಕಾಲೇಜಿನ ಹೆಸರು |
ಸುಮ ಎಂ. | ಕನ್ನಡ | ದ್ವಿತೀಯ ಬಿಎಸ್ಸಿ, ಸುರಾನಾ ಕಾಲೇಜು, ಪೀಣ್ಯ ಕ್ಯಾಂಪಸ್, ಬೆಂಗಳೂರು |
ಸೌಮ್ಯಾ ಎನ್.ಆರ್. | ಕನ್ನಡ | 3ನೇ ಬಿಎಸ್ಸಿ, ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು |
ಶಾಹುಲ್ ಕೆ.ಎಸ್. | ಕನ್ನಡ | 3ನೇ ಬಿಕಾಂ, ಹೊಯ್ಸಳೇಶ್ವರ ಪದವಿ ಕಾಲೇಜು, ಅರಸೀಕೆರೆ, ಹಾಸನ ಜಿಲ್ಲೆ |
ರಂಜಿತಾ ಸಿ.ಆರ್. | ಕನ್ನಡ | ದ್ವಿತೀಯ ಎಂಎಸ್ಸಿ, ಎಸ್.ಬಿ.ಆರ್.ಆರ್ ಮಹಾಜನ್ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಿಭಾಗ, ಮೈಸೂರು |
ಅಂಬಮ್ಮ | ಆಂಗ್ಲ | 1ನೇ ವರ್ಷ, ಅನಿಕೇತನ ಪದವಿ ಕಾಲೇಜು,ಸಿಂಧನೂರು, ರಾಯಚೂರು |
ಅಪೂರ್ವ ಎಸ್. | ಆಂಗ್ಲ | 2ನೇ ಎಂಕಾಂ, ದಾವಣಗೆರೆ ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ, ಚಿತ್ರದುರ್ಗ |
ರೋಹಿತ್ ಚವ್ಹಾಣ್ ಗೌಡರ್ | ಆಂಗ್ಲ | ಎಸ್.ಜೆ.ಎಂ.ವಿ. ಬಿಸಿನೆಸ್ ಅಡ್ಮಿನಿಸ್ಟ್ರೇಟಿವ್ ಮಹಿಳಾ ಕಾಲೇಜು, ಜೆ.ಸಿ.ನಗರ, ಹುಬ್ಬಳ್ಳಿ |
ಸಮನ್ ಎ ನದಾಫ್ | ಆಂಗ್ಲ |
