ಗೂಗಲ್ ವಿಜ್ಞಾನ ಹಬ್ಬ ಲೋಗೋ

ಅರ್ಜಿ ಸಲ್ಲಿಸುವಿಕೆ ಆರಂಭ : ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ

ಗೂಗಲ್ ವಿಜ್ಞಾನ ಹಬ್ಬವು ವಿಜ್ಞಾನ ಮತ್ತು ಇಂಜಿನಿಯರಿಂಗ್ ಪರಿಯೋಜನೆಯ ಆನ್‍ಲೈನ್ ಸ್ಪರ್ಧೆಯಾಗಿದ್ದು, ಜಗತ್ತಿನಾದ್ಯಂತ 13 ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ವೈಚಾರಿಕತೆ ಮತ್ತು ಸಮಸ್ಯೆಗಳ ಪರಿಹಾರದ ಮೂಲಕ ತಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಬದಲಾಯಿಸುವತ್ತ ಮುಂದಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ: ವೈಯಕ್ತಿಕವಾಗಿ ಅಥವಾ ಗರಿಷ್ಠ 3 ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ಗುಂಪು ಆನ್‍ಲೈನ್ ಮೂಲಕ ಭಾಗವಹಿಸಬಹುದಾಗಿದೆ. ಸ್ಪರ್ಧಾಳುಗಳು ಈ ಕೆಳಕಂಡ ಯಾವುದಾದರೊಂದು ವಿಷಯಗಳನ್ನು ಮುಖ್ಯ ವಿಷಯಗಳನ್ನಾಗಿ ಹಾಗೂ ಅದರಡಿ ಗರಿಷ್ಠ ಎರಡು ಉಪ ವಿಷಯಗಳನ್ನು ಆಯ್ಕೆ ಮಾಡಿ ಕೊಂಡು ಪ್ರವೇಶಿಸಬಹುದಾಗಿದೆ.

 • ಸಸ್ಯ ಮತ್ತು ಪ್ರಾಣಿ
 • ಆಹಾರ ವಿಜ್ಞಾನ
 • ಭೂಮಿ ಮತ್ತು ಪರಿಸರ ವಿಜ್ಞಾನ
 • ಆವಿಷ್ಕಾರಗಳು ಮತ್ತು ನಾವೀನ್ಯತೆ
 • ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್
 • ರೋಬೋಟಿಕ್ಸ್
 • ಜೀವಶಾಸ್ತ್ರ
 • ನಡವಳಿಕೆ ಮತ್ತು ಸಮಾಜ ವಿಜ್ಞಾನಗಳು
 • ಶಕ್ತಿ ಮತ್ತು ಬಾಹ್ಯಾಕಾಶ
 • ಖಗೋಳ ಭೌತಶಾಸ್ತ್ರ
 • ಗಣಕ ವಿಜ್ಞಾನ ಮತ್ತು ಗಣಿತ

ಪ್ರಶಸ್ತಿಯ ವರ್ಗಗಳು

ಪ್ರಯೋಗ ವರ್ಗ

 • ಸೈಂಟಿಫಿಕ್ ಅಮೇರಿಕಾ ಸಂಶೋಧಕ ಪ್ರಶಸ್ತಿ
 • ನ್ಯಾಷನಲ್ ಜಿಯೋಗ್ರಾಫಿಕ್ ಪರಿಶೋಧಕ ಪ್ರಶಸ್ತಿ

ಇಂಜಿನಿಯರಿಂಗ್ ವರ್ಗ

 • ದಿ ಲಿಂಗೂ ಎಡುಕೇಶನ್ ಬಿಲ್ಡರ್ ಪ್ರಶಸ್ತಿ
 • ದಿ ವರ್ಜಿನ್ ಗ್ಯಾಲಾಕ್ಟಿಕ್ ಪ್ರ್ರಶಸ್ತಿ

ಮಹೋನ್ನತ ಪ್ರಶಸ್ತಿ

ಮೇಲಿನ ವರ್ಗಗಳಲ್ಲಿನ ಉತ್ತಮವಾದ ವಿಜೇತರನ್ನು ಮಹೊನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಮಹೋನ್ನತ ಪ್ರಶಸ್ತಿ ವಿಜೇತರಿಗೆ ಮೇಲ್ಕಂಡ ವರ್ಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ ಆದರೆ, ಮಹೊನ್ನತ ಪ್ರಶಸ್ತಿ ವಿಜೇತರು ಕಮ್ಯೂನಿಟಿ ಇಂಪಾಕ್ಟ್ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

ಇತರೆ ಪ್ರಶಸ್ತಿಗಳು

 • ಕಮ್ಯೂನಿಟಿ ಇಂಫಾಕ್ಟ್ ಪ್ರಶಸ್ತಿ
 • ಸ್ಪೂರ್ತಿದಾಯಕ ಶಿಕ್ಷಕ ಪ್ರಶಸ್ತಿ – ಈ ಪ್ರಶಸ್ತಿಯು ವಿಜ್ಞಾನ ಹಬ್ಬದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕನಿಗೆ ನೀಡಲಾಗುವುದು.

ಈ ಲಿಂಕ್ ಗೂಗಲ್ ವಿಜ್ಞಾನ ಹಬ್ಬದ ಹೆಚ್ಚಿನ ವಿವರವನ್ನು ನೀಡುತ್ತದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content