ನಮ್ಮ ಬಗ್ಗೆ

ಈ ಪುಟದ ನವೀಕರಣ ದಿನಾಂಕ This Page was last updated on ಜುಲೈ 4th, 2020 at 11:51 ಫೂರ್ವಾಹ್ನ

ಹಿನ್ನೆಲೆ

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 30, 2005 (ಸರ್ಕಾರಿ ಆದೇಶ ಸಂಖ್ಯೆ: ವಿಯಇ 70 ವಿತ್ರಮ 2004)ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸ್ಥಾಪಿಸಿತ್ತು. ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾಯಿದೆ 1960 ರಡಿಯಲ್ಲಿ ಏಪ್ರಿಲ್ 06, 2009 ರಂದು ನೊಂದಾಯಿಸಿರುತ್ತದೆ.

ಅಕಾಡೆಮಿಯು, ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವ ಮತ್ತು ಈ ಕ್ಷೇತ್ರಗಳಲ್ಲಾದ ಪ್ರಗತಿಯ ಬಗ್ಗೆ ತಿಳುವಳಿಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಪ್ರಸ್ತುತ ಅಕಾಡೆಮಿಯು ಪ್ರಮುಖ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 13 ಸದಸ್ಯರನ್ನು ಹೊಂದಿದೆ.

ಅಧ್ಯಕ್ಷರು

ಪ್ರೊ. ಎಸ್ ಅಯ್ಯಪ್ಪನ್

ಕುಲಾಧಿಪತಿಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ, ಇಂಪಾಲ ಮತ್ತು ನಿವೃತ್ತ ಮಹಾ ನಿರ್ದೇಶಕರು, ಭಾರತೀಯ ಕೃಷಿ ಅನುಸಂದಾನ ಪರಿಷತ್‍ನ ಹಾಗೂ
ನಿವೃತ್ತ ಕಾರ್ಯದರ್ಶಿಗಳು, ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗ, ಭಾರತ ಸರ್ಕಾರ

ಸದಸ್ಯರು

ಅಕಾಡೆಮಿಯು ಒಟ್ಟು 13 ಸದಸ್ಯರನ್ನು ಹೊಂದಿದೆ (09 ನಾಮನಿರ್ದೇಶಿತ ಸದಸ್ಯರು ಮತ್ತು 04 ಪದನಿಮಿತ್ತ ಸದಸ್ಯರು)

ಸರ್ಕಾರದ ಪದನಿಮಿತ್ತ ಸದಸ್ಯರು

ಶ್ರೀ ಐ.ಎಸ್.ಎನ್. ಪ್ರಸಾದ್, ಭಾಆಸೇ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಆರ್ಥಿಕ ಇಲಾಖೆ

ಡಾ. ಇ ವಿ ರಮಣ ರೆಡ್ಡಿ, ಭಾಆಸೇ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ತಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಉನ್ನತ ಶಿಕ್ಷಣ ಇಲಾಖೆ

ಡಾ. ಇ ವಿ ರಮಣ ರೆಡ್ಡಿ, ಭಾಆಸೇ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಉನ್ನತ ಶಿಕ್ಷಣ ಇಲಾಖೆ

ಡಾ. ಪ್ರಕಾಶ್ ಎಂ. ಸೊಬರದ್

ನಿರ್ದೇಶಕರು (ತಾಂತ್ರಿಕ), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ಎಂಡಿ, ಕೆಸ್ಟೆಪ್ಸ್/ಸದಸ್ಯ ಕಾರ್ಯದರ್ಶಿಗಳು, ಕವಿತಂಅ

ನಾಮನಿರ್ದೇಶಿತ ಸದಸ್ಯರು

ಪ್ರೊ. ಹೆಚ್. ಎ. ರಂಗನಾಥ್

ವಿಶ್ರಾಂತ ಕುಲಪತಿಗಳು,
ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು

ಪ್ರೊ. ಬಿ. ಜಿ. ಮೂಲಿಮನಿ

ವಿಶ್ರಾಂತ ಕುಲಪತಿಗಳು,
ಗುಲ್ಬರ್ಗ ವಿಶ್ವವಿದ್ಯಾನಿಲಯ, ಕಲಬುರಗಿ

ಪ್ರೊ. ಎ. ಹೆಚ್. ರಾಜಾಸಾಬ್

ವಿಶ್ರಾಂತ ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಪ್ರೊ. ಕೆ. ಬಾಲವೀರ ರೆಡ್ಡಿ

ವಿಶ್ರಾಂತ ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ

ಪ್ರೊ. ಎಸ್. ಕೆ. ಸೈದಾಪುರ

ವಿಶ್ರಾಂತ ಕುಲಪತಿಗಳು,
ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ

ಪ್ರೊ. ವಿ. ಜಿ. ತಳವಾರ್

ವಿಶ್ರಾಂತ ಕುಲಪತಿಗಳು,
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಡಾ. ಎ. ಇ. ಏಕನಾಥ್

ನಿವೃತ್ತ ಮಹಾನಿರ್ದೇಶಕರು, ಎನ್.ಎ.ಸಿ.ಎ ಹಾಗೂ ನಿವೃತ್ತ ನಿರ್ದೇಶಕರು, ಸಿ.ಐ.ಎಫ್.ಎ.

ಡಾ. ಡಿ. ಚನ್ನೇಗೌಡ

ನಿವೃತ್ತ ಪ್ರಾಧ್ಯಾಪಕರು, ರಸಾಯನ ಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ವಿಶೇಷ ಆಹ್ವಾನಿತರು (ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿ)

ಪ್ರೊ. ಕತ್ರೆ ಶಕುಂತಲಾ

ವಿಶ್ರಾಂತ ಡೀನ್ (ವಿಜ್ಞಾನ) / ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ

ಪ್ರೊ. ಹೆಚ್ಎಸ್. ಸಾವಿತ್ರಿ

ವಿಶ್ರಾಂತ ಮುಖ್ಯಸ್ಥರು, ಜೀವ ರಸಾಯನ ಶಾಸ್ತ್ರ ವಿಭಾಗ ಹಾಗೂ NASI ಹಿರಿಯ ವಿಜ್ಞಾನಿ,ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

ವಿಶೇಷ ಆಹ್ವಾನಿತರು (ಸಂಪಾದಕ ಸಮಿತಿ)

ನಾಡೋಜ ಡಾ. ಪಿ ಎಸ್‍. ಶಂಕರ್

ಎಮಿರಿಟಸ್ ಮೆಡಿಸಿನ್ ಪ್ರೊಫೆಸರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ/ ವಿಜ್ಞಾನ ಲೋಕ ಪ್ರಧಾನ ಸಂಪಾದಕರು

ಶ್ರೀ ನಾಗೇಶ್ ಹೆಗಡೆ

ಹೆಸರಾಂತ ವಿಜ್ಞಾನ ಲೇಖಕರು ಮತ್ತು ಸಂವಹನಕಾರರು/ ಸಂದರ್ಶಕ ಪ್ರಾಧ್ಯಾಪಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಮ್ ಅಂಡ್ ನ್ಯೂಸ್ ಮೀಡಿಯಾ, ಬೆಂಗಳೂರು

2 thoughts on “ನಮ್ಮ ಬಗ್ಗೆ

 1. ನಮಸ್ತೇ,
  ಮಾನ್ಯರೇ, ನಾನು ಮಹೇಶ್ ಭಟ್ ಆಗಿದ್ದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಳುಕಿನವ್ನು ಆಗಿದ್ದು ನಿಮ್ಮ ಇಲಾಖೆಯಿಂದ ನಡೆಯುವ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯ ಸಹಯೋಗದಲ್ಲಿ ನಡೆಸಲು ಅವಕಾಶವನ್ನು ನೀಡಬೇಕಾಗಿ ವಿನಂತಿ .
  ಮಹೇಶ್ ಭಟ್ ಜನಪ್ರಿಯ ಟ್ರಸ್ಟ್
  7892765412

  1. ಪ್ರಿಯ ಮಹೇಶ್ ಭಟ್ ರವರೇ,
   ಅಕಾಡೆಮಿಯು ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ವಿವಿಧ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯ, ಪದವಿ ಕಾಲೇಜು ಮತ್ತು ಇತರೆ ಸರ್ಕಾರಿ/ಅನುದಾನಿತ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುತ್ತಿದೆ. ಅಲ್ಲದೆ, ಕಳೆದ ಸಾಲಿನಿಂದ ಸ್ಮಾಲ್ ಗ್ರಾಂಟ್ಸ್ ಕಾರ್ಯಕ್ರಮದಡಿಯಲ್ಲಿ ಸಂಘ ಸಂಸ್ಥೆಗಳಿಗೆ ರೂ. 10 ಸಾವಿರ ದಿಂದ ರೂ.50 ಸಾವಿರದ ಮಿತಿಯೋಳಗೆ ಅನುದಾನ ನೀಡಲಾಗುತ್ತಿದ್ದು, 2020-’21ನೇ ಆರ್ಥಿಕ ವರ್ಷದಲ್ಲಿ ಹಣಕಾಸಿನ ಕೊರತೆ ಹಾಗೂ ಕೋವಿಡ್19 ಪಿಡುಗಿರುವುದರಿಂದ ಯಾವುದೇ ಅನುದಾನ ನೀಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಅವಕಾಶವಿದ್ದರೆ ತಮಗೆ ತಿಳಿಸಲಾಗುವುದು. ನಮ್ಮ ಜಾಲತಾಣದ ಸಂಪರ್ಕದಲ್ಲಿರಲು ಕೋರಿದೆ.

   ವಂದನೆಗಳೊಂದಿಗೆ
   ಆಕಾಡೆಮಿ

Comments are closed.

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content