ಈ ಪುಟದ ನವೀಕರಣ ದಿನಾಂಕ This Page was last updated on ಅಕ್ಟೋಬರ್ 23rd, 2020 at 04:04 ಅಪರಾಹ್ನ

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅಕಾಡೆಮಿಯು ಫೆಲೋಶಿಪ್ ನ್ನು ಈ ಕೆಳಕಂಡ ವಿಭಾಗಗಳಲ್ಲಿ ಎರಡು ವರ್ಗಗಳ ಫೆಲೋಶಿಪ್ ನೀಡಲಾಗುತ್ತಿದೆ – (i) ಗೌರವ; ಮತ್ತು (ii) ಚುನಾಯಿತ

ಗೌರವ

ಚುನಾಯಿತ

  • ಅಕಾಡೆಮಿಯ ವಿಜ್ಞಾನ ಮತ್ತು ತಂತ್ರಜ್ಞಾನ ಜೀವಮಾನ ಸಾಧನೆ ಪ್ರಶಸ್ತಿ; ಮತ್ತು ವಿಜ್ಞಾನ ಸಂವಹನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು ಗೌರವ ಫೆಲೋಗಳಾಗಬೇಕು
  • ಪ್ರತಿ ವರ್ಷ ಅಕಾಡೆಮಿಯ ಕಾರ್ಯಕಾರಿ ಸಮಿತಿಯು ಈ ಕೆಳಗೆ ನೀಡಿರುವ ಕ್ಷೇತ್ರಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ವಿಜ್ಞಾನ ಸಂವಹನಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ 12 ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವುದು, 2020 ರಿಂದ ಈ ಪ್ರಕ್ರಿಯೆ ಪ್ರಾರಂಭ (ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಆ ವರ್ಷದಲ್ಲಿ ನೀಡದಿರಬಹುದು)
  • ಫೆಲೋಗಳು, ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದು, ಕರ್ನಾಟಕ ಮೂಲದವರಾಗಿ (ಹುಟ್ಟಿನಿಂದ ಅಥವಾ ವಾಸದಿಂದ), ಪ್ರಪಂಚದ ಯಾವುದೇ ಭಾಗದಲ್ಲಿ ನೆಲಸಿರಬಹುದು, ವಯಸ್ಸಿನ ನಿರ್ಬಂಧಗಳಿಲ್ಲದೆ,
  • ಈ ಉಪಬಂಧ, ವಿಜ್ಞಾನ & ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಗುರುತಿಸುವ ಉದ್ದೇಶವನ್ನು ಮಾತ್ರ ಹೊಂದಿದ್ದು, ಅಕಾಡೆಮಿಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದು. ಇದಲ್ಲದೆ, ಗೌರವ ಫೆಲೋಗಳ ಒಂದು ಸಮೂಹ ರಚಿಸಿದ ಎರಡು ವರ್ಷಗಳ ನಂತರ ಅಂದರೆ 2022ರಲ್ಲಿ ಇದನ್ನು ಜಾರಿಗೆ ತರಲಾಗುವುದು.
  • ಹೊಸ ಜ್ಞಾನದ ಉಗಮಕ್ಕೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಪ್ರೋತ್ಸಾಹಕ್ಕೆ ಮತ್ತು ಬಳಕೆಗೆ ನೀಡಿರುವ ವಿಶಿಷ್ಟ ಕೊಡುಗೆಗಳ ಆಧಾರದ ಮೇಲೆ ಪ್ರತಿ ವರ್ಷ ಈ ಕೆಳಗಿನ ಪ್ರತಿಯೊಂದು ವಿಭಾಗಗಳಲ್ಲಿ  ಕರ್ನಾಟಕ ಮೂಲದ (ಹುಟ್ಟಿನಿಂದ ಅಥವಾ ವಾಸದಿಂದ) ಜಗತ್ತಿನ ಯಾವುದೇ ಭಾಗದಲ್ಲಿ ನೆಲಸಿರುವ ಇಬ್ಬರು ಫೆಲೋಗಳನ್ನು (ಗರಿಷ್ಠ 24; ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಒಂದು ನಿರ್ದಿಷ್ಟ ವರ್ಷದಲ್ಲಿ ನೀಡಲಾಗುವುದಿಲ್ಲ) ಆಯ್ಕೆ ಮಾಡಲಾಗುವುದು.
  • ಗೌರವ ಫೆಲೋಗಳ ಒಂದು ಸಮೂಹ ರಚಿಸಿದ ನಂತರ, ಅಂದರೆ 2022ರಲ್ಲಿ; ಅಕಾಡೆಮಿಯ ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲಾಗುವುದು ಹಾಗೂ ಗೌರವ ಫೆಲೋಗಳಿಂದ, ನಾಮನಿರ್ದೇಶನ ಮೂಲಕ ಅವರ ವೈಜ್ಞಾನಿಕ ಕೊಡುಗೆಗಳು, ದಾಖಲೆ, ಪ್ರಕಟಣೆ, ಪೇಟೆಂಟ್ ಇತ್ಯಾದಿಗಳನ್ನು ಆಧರಿಸಿ, ಮಹಿಳಾ ವಿಜ್ಞಾನಿಗಳಿಗೆ ವಿಶೇಷ ಗಮನ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು

ಅರ್ಜಿ ನಮೂನೆ – ದಿನಾಂಕ 28.10.2020 ರಂದು ಅಪ್ ಲೋಡ್ ಮಾಡಲಾಗುವುದು

ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳು

ಕೃಷಿ ವಿಜ್ಞಾನಗಳು

ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯಶಾಸ್ತ್ರ, ಕೃಷಿ ಟಾಕ್ಸಿಕಾಲಜಿ, ಮಣ್ಣು ವಿಜ್ಞಾನ, ಸಸ್ಯ ಸಂರಕ್ಷಣೆ, ಕಟಾವಿನ ನಂತರದ ತಂತ್ರಜ್ಞಾನ, ಕೃಷಿ ಎಂಜಿನಿಯರಿಂಗ್ ಸೇರಿದಂತೆ.

ಪ್ರಾಣಿ ವಿಜ್ಞಾನ

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ನಡವಳಿಕೆ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳನ್ನು ಒಳಗೊಂಡು

ಬಯೋಕೆಮಿಸ್ಟ್ರಿ, ಬಯೋಫಿಸಿಕ್ಸ್, ಬಯೋಟೆಕ್ನಾಲಜಿ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ರಾಸಾಯನಿಕ ವಿಜ್ಞಾನ

ವಿಶ್ಲೇಷಣಾತ್ಮಕ, ಅಜೈವಿಕ, ಸಾವಯವ, ಭೌತಿಕ, ಸೈದ್ಧಾಂತಿಕ ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ ಸೇರಿದಂತೆ

ಅರ್ಥ್ ಸೈನ್ಸ್

ಇದರಲ್ಲಿ ವಾಯುಮಂಡಲ ವಿಜ್ಞಾನ, ಭೂ-ವಿಜ್ಞಾನ, ಸಾಗರವಿಜ್ಞಾನ, ಭೂಗೋಳಶಾಸ್ತ್ರ
ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ತಂತ್ರಜ್ಞಾನ

ಎಂಜಿನಿಯರಿಂಗ್ ಸೈನ್ಸ್, ಕೆಮಿಕಲ್ ಅಂಡ್ ಮೆಟೀರಿಯಲ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್, ಇನ್ ಫರ್ಮೇಷನ್ ಟೆಕ್ನಾಲಜಿ, ಇನ್ ಸ್ಟ್ರುಮೆಂಟೇಶನ್ ಸೇರಿದಂತೆ

ಗಣಿತ ವಿಜ್ಞಾನ

ಶುದ್ಧ ಗಣಿತ, ಅನ್ವಯಿಕ ಗಣಿತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ / ಮಾಹಿತಿ ವಿಜ್ಞಾನ ಸೇರಿದಂತೆ

ವೈದ್ಯಕೀಯ & ವಿಧಿವಿಜ್ಞಾನ ವಿಜ್ಞಾನ

ಇದರಲ್ಲಿ ಬೇಸಿಕ್ ಮತ್ತು ಕ್ಲಿನಿಕಲ್ ಮೆಡಿಕಲ್ ಸೈನ್ಸಸ್, ಫಾರ್ಮಕಾಲಜಿ, ಆಂತ್ರೊಪಾಲಜಿ, ಸೈಕಾಲಜಿ ಮತ್ತು ವಿಧಿವಿಜ್ಞಾನ ವಿಜ್ಞಾನ, ಮಾನವ ತಳಿಶಾಸ್ತ್ರ, ಸಂತಾನೋತ್ಪತ್ತಿ ಜೀವಶಾಸ್ತ್ರ, ನರವಿಜ್ಞಾನ, ಅಣು ವೈದ್ಯಶಾಸ್ತ್ರ ಸೇರಿದಂತೆ ಹಲವು ಅಂಶಗಳು ಸೇರಿವೆ.

ಭೌತಿಕ ವಿಜ್ಞಾನ

ಖಗೋಳಶಾಸ್ತ್ರ, ಖಭೌತಶಾಸ್ತ್ರ, ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ ಸೇರಿದಂತೆ

ಸಸ್ಯ ವಿಜ್ಞಾನಗಳು

ರಚನಾತ್ಮಕ, ಅಭಿವೃದ್ಧಿ, ಕ್ರಿಯಾತ್ಮಕ, ಅನುವಂಶಿಕ, ಪರಿಸರ, ಟ್ಯಾಕ್ಸಾನಾಮಿಕಲ್ ಮತ್ತು ವಿಕಸನೀಯ ಅಂಶಗಳು ಒಳಗೊಂಡಿವೆ

ವಿಜ್ಞಾನ & ಸೊಸೈಟಿ

ಇದರಲ್ಲಿ ಫಿಲಾಸಫಿ ಆಫ್ ಸೈನ್ಸ್, ಹಿಸ್ಟರಿ ಆಫ್ ಸೈನ್ಸ್, ಎಥಿಕ್ಸ್, ಸೈನ್ಸ್ ಪಾಲಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಆಧಾರಿತ ಉದ್ಯಮಶೀಲತೆ, ಎಸ್ ಅಂಡ್ ಟಿ ಮ್ಯಾನೇಜ್ ಮೆಂಟ್, ಸೈನ್ಸ್ ಜನಪ್ರಿಯತೆ

ಸಮಾಜ ವಿಜ್ಞಾನಗಳು

ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಸಂವಹನ, ಗೃಹ ವಿಜ್ಞಾನ ಸೇರಿದಂತೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content