ಅಕಾಡೆಮಿಯ ಹಿನ್ನಲೆ

ಈ ಪುಟದ ನವೀಕರಣ ದಿನಾಂಕ This Page was last updated on ಜುಲೈ 2nd, 2020 at 08:54 ಫೂರ್ವಾಹ್ನ

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 30, 2005 (ಸರ್ಕಾರಿ ಆದೇಶ ಸಂಖ್ಯೆ: ವಿಯಇ 70 ವಿತ್ರಮ 2004)ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸ್ಥಾಪಿಸಿತ್ತು. ಅಕಾಡೆಮಿಯು, ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವ ಮತ್ತು ಈ ಕ್ಷೇತ್ರಗಳಲ್ಲಾದ ಪ್ರಗತಿಯ ಬಗ್ಗೆ ತಿಳುವಳಿಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅಕಾಡೆಮಿಯ ಇತಿಹಾಸದ ವಿವಿಧ ಘಟ್ಟಗಳ ವಿವರ ಕೆಳಕಂಡಂತಿದೆ:

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

2004
28/10/2004

ಪ್ರಸ್ತಾವನೆ

ಭಾರತ ಸರ್ಕಾರದ ಅಂದಿನ ಮಾನ್ಯ ಯೋಜನಾ ರಾಜ್ಯ ಮಂತ್ರಿಗಳು ತಮ್ಮ ಪತ್ರದಲ್ಲಿ,  ಸ್ಪರ್ಧಾ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗದಿದ್ದರೆ ಪ್ರಾದೇಶಿಕ ಬೆಳವಣಿಗೆ ಸಾಧ್ಯವಾಗುವುದಿಲ್ಲ ಹಾಗೂ ಖ್ಯಾತ ವಿಮರ್ಶಕಾರರಾದ ಶ್ರೀ ಎಲ್. ಎನ್. ಶೇಷಗಿರಿರಾವ್ ರವರು ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದು ಕರೆ ಕೊಟ್ಟಿದ್ದಾರೆಂದು  ಅಂದಿನ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರನ್ನು ಕೋರಿದ್ದರು.
01/11/2004

ಘೋಷಣೆ

ಈ ಪುಟದ ನವೀಕರಣ ದಿನಾಂಕ This Page was last updated on ಜೂನ್ 26th, 2020 at 11:58 ಫೂರ್ವಾಹ್ನ 2004 ರ ಕನ್ನಡ ರಾಜೋತ್ಸವ ಆಚರಣೆಯ ಸಂದಂರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ರಚಿಸುವುದಾಗಿ ಘೋಷಣೆ
2005
30/07/2005

ಸ್ಥಾಪನೆ

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 30, 2005 (ಸರ್ಕಾರಿ ಆದೇಶ ಸಂಖ್ಯೆ: ವಿಯಇ 70 ವಿತ್ರಮ 2004)ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸ್ಥಾಪಿಸಿತ್ತು.
30/07/2005

ಆಧ್ಯಕ್ಷರು ಮತ್ತು ಸದಸ್ಯರ ನೇಮಕ

ಸರ್ಕಾರವು ಅಕಾಡೆಮಿಯನ್ನು ರಚಿಸಿ, ಪ್ರಮುಖ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಆದೇಶ.
26/09/2005

ಉದ್ಘಾಟನೆ

ಅಕಾಡೆಮಿಯನ್ನು 2005ರ ಸೆಪ್ಟೆಂಬರ್ 5 ರಂದು ಉದ್ಘಾಟಿಸಲಾಯಿತು
2006
06/04/2006

ಸ್ವಾಯತ್ತ ಸಂಸ್ಥೆ

ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾಯಿದೆ 1960 ರಡಿಯಲ್ಲಿ ಏಪ್ರಿಲ್ 06, 2009 ರಂದು ನೊಂದಾಯಿಸಿರುತ್ತದೆ.
2008
04/11/2008

ಮೊದಲನೇ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ಪುನರ್ ರಚಿಸಿ, 2008ರ ನವೆಂಬರ್ 04 ರಂದು ಸರ್ಕಾರದ ಆದೇಶ
2012
28/05/2012

ಎರಡನೇ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ಎರಡನೇ ಬಾರಿ ಪುನರ್ ರಚಿಸಿ, 2012ರ ಮೇ 28 ರಂದು ಸರ್ಕಾರದ ಆದೇಶ
2015
04/11/2015

ಮೂರನೇ ಪುನರ್ ರಚನೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ಮೂರನೇ ಬಾರಿ ಪುನರ್ ರಚಿಸಿ, 2015ರ ನವೆಂಬರ್ 04 ರಂದು ಸರ್ಕಾರದ ಆದೇಶ
2020
21/05/2020

ನಾಲ್ಕನೇ ಪುನರ್ ರಚನೆ

ಈ ಪುಟದ ನವೀಕರಣ ದಿನಾಂಕ This Page was last updated on ಜೂನ್ 29th, 2020 at 11:29 ಫೂರ್ವಾಹ್ನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ನಾಲ್ಕನೇ ಬಾರಿ ಪುನರ್ ರಚಿಸಿ, 2020ರ ಮೇ 21 ರಂದು ಸರ್ಕಾರದ ಆದೇಶ
ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content