ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 14: ಈ ದಿನ, ಅಂದು

1 min read

ನವೆಂಬರ್ 14: ಬೀರ್ಬಲ್ ಸಾಹನಿ ರವರ ಜನ್ಮದಿನ

  • ಭಾರತೀಯ ಉಪಖಂಡದ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಪುರಾತತ್ವ ಸಸ್ಯಶಾಸ್ತ್ರಜ್ಞ
  • ಪಶ್ಚಿಮ ಪಂಜಾಬ್ ನಲ್ಲಿ ನವೆಂಬರ್ 14, 1891 ರಂದು ಜನಿಸಿದರು.
  • ಭೂವಿಜ್ಞಾನಿಯೂ ಆಗಿದ್ದ ಇವರು ಪುರಾತತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ವರ್ತಮಾನ ಮತ್ತು ಐತಿಹಾಸಿಕ ಭಾರತದ ಸಸ್ಯಗಳ ಅಧ್ಯಯನ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ.
  • 1936ರಲ್ಲಿ ರಾಯಲ್ ಸೊಸೈಟಿ ಆಫ್ ಲಂಡನ್ (‍FRS) ಫೆಲೋ ಆಗಿ ಆಯ್ಕೆಯಾದರು, ಇದು ಮೊಟ್ಟ ಮೊದಲ ಬಾರಿಗೆ ಭಾರತೀಯ ಸಸ್ಯವಿಜ್ಞಾನಿಗೆ ಸಂದ ಅತ್ಯುನ್ನತ ಬ್ರಿಟಿಷ್ ವೈಜ್ಞಾನಿಕ ಗೌರವ
  • ಅವರು 1946ರ ಸೆಪ್ಟೆಂಬರ್ 10ರಂದು ಪುರಾತತ್ವ ಸೊಸೈಟಿಯನ್ನು ಸ್ಥಾಪಿಸಿದರು. ಈಗ ಇದನ್ನು ಬೀರಬಲ್ ಸಹಾನಿ ಪುರಾತತ್ವ ವಿಜ್ಞಾನ ಸಂಸ್ಥೆ ಎಂದು ಕರೆಯಲಾಗುತ್ತಿದೆ.

ನವೆಂಬರ್ 14: ಲಿಯೋ ಹೆಂಡ್ರಿಕ್ ಬೇಕಲ್ಯಾಂಡ್ ರವರ ಜನ್ಮದಿನ

  • ಮೊದಲ ಕೃತಕ ಪ್ಲಾಸ್ಟಿಕ್ – ಬೇಕಲೈಟ್ ನ ಆವಿಷ್ಕಾರಕ
  • ಶೆಲ್ಲಾಕ್ ಗೆ ಪರ್ಯಾಯವನ್ನು ಕಂಡುಹಿಡಿಯಲು ಸಂಶೋಧನೆಯನ್ನು ನಡೆಸುತ್ತಿದ್ದರು. ಆ ಸಮಯದಲ್ಲಿ ಏಷ್ಯಾದ ಲ್ಯಾಕ್ ಜೀರುಂಡೆಗಳ ಚಿಪ್ಪುಗಳಿಂದ ಶೆಲ್ಲಾಕ್ ತಯಾರಿಸಲಾಗುತ್ತಿತ್ತು
  • ಶೆಲ್ಲಾಕ್, ಭಾರತ ಮತ್ತು ಥಾಯ್ಲೆಂಡ್ ನ ಕಾಡುಗಳಲ್ಲಿ ಮರದ ಮೇಲೆ ಹೆಣ್ಣು ಲ್ಯಾಕ್ ಜೀರುಂಡೆಗಳು ಸ್ರವಿಸುವ ಒಂದು ರೆಸಿನ್
  • ಫಿನಾಲ್ ಮತ್ತು ಫಾರ್ಮಾಲ್ಡಿಹೈಡ್ ನಿಂದ ತಯಾರಿಸಲಾದ ಪಾಲಿಮರಿಕ್ ಪ್ಲಾಸ್ಟಿಕ್, ಬೇಕಲೈಟ್ ಆಧುನಿಕ ಜೀವನದ ಭೌತಿಕ ತಳಹದಿಯನ್ನು ಮಾರ್ಪಡಿಸುವ ಸಂಶ್ಲೇಷಿತ ವಸ್ತುಗಳಲ್ಲಿ ಒಂದಾಗಿತ್ತು.
  • ಬೇಕಲೈಟ್ ನಿಂದ ತಯಾರಿಸಿದ ಬಣ್ಣಬಣ್ಣದ ವಸ್ತುಗಳು, ಆಭರಣಗಳು, ದೂರವಾಣಿ ಮತ್ತು ರೇಡಿಯೋ ಭಾಗಗಳು, ಬಿಲಿಯರ್ಡ್ ಬಾಲ್ ಗಳು, ಇತ್ಯಾದಿ  ಇಪ್ಪತ್ತನೇ ಶತಮಾನದ ಮೊದಲ ಭಾಗದ ದೈನಂದಿಕ ಜೀವನ ವರ್ಣಮಯವಾಗುವುದಕ್ಕೆ ಕಾರಣವಾಗಿತ್ತು

ನವೆಂಬರ್ 14: ಫ್ರೆಡೆರಿಕ್ ಗ್ರಾಂಟ್ ಬ್ಯಾನ್ಟಿಂಗ್ ರವರ ಜನ್ಮದಿನ

  • ಮೊದಲ ಬಾರಿಗೆ ಇನ್ಸುಲಿನ್ ಅನ್ನು ಯಶಸ್ವಿಯಾಗಿ ಸಂಸ್ಕರಿಸಿದರು
  • ಇನ್ಸುಲಿನ್ ನ ಆವಿಷ್ಕಾರಕ್ಕಾಗಿ 1923ರಲ್ಲಿ ಜಾನ್ ಜೇಮ್ಸ್ ರಿಕ್ಕರ್ಡ್ ಮ್ಯಾಕ್ಲಿಯೋಡ್ ರೊಂದಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content