ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಭಾಗ ಮತ್ತು ರಾಜ್ಯ ಮಟ್ಟಗಳಲ್ಲಿ ನಾಟಕ, ಗಣಿತ ಮತ್ತು ಚಿತ್ರಕಲೆ/ಪೈಂಟಿಂಗ್ ಸ್ಪರ್ಧೆಗಳನ್ನು ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದೆ.
ಬೆಂಗಳೂರು ವಿಭಾಗದ ಸ್ಪರ್ಧೆಗಳು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.
ಬೆಂಗಳೂರು ವಿಭಾಗದ ಸ್ಪರ್ಧೆಗಳನ್ನು 2020ರ ಫೆಬ್ರವರಿ 11 & 12 ರಂದು ನಡೆಸಲಾಗುತ್ತಿದೆ
ಕಾರ್ಯಕ್ರಮದ ಕೈಪಿಡಿ- ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.
ಕಾರ್ಯಕ್ರಮದ ಕರಪತ್ರ – ಈ ಲಿಂಕ್ ಮೂಲಕ ಕಾರ್ಯಕ್ರಮದ ಕರಪತ್ರವನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.
ವೇಳಾಪಟ್ಟಿ (ತಾತ್ಕಾಲಿಕ) ಮತ್ತುಸೂಚನೆಗಳು
- 9:30 ರಿಂದ 10:30 – ನೋಂದಣಿ
- 10:30 ರಿಂದ 11:00 – ಉದ್ಘಾಟನೆ
- 11:00 ರಿಂದ 11:30 – ಹೈ ಟೀ
ಸ್ಪರ್ಧೆಗಳು | ಸಮಯ |
ಫೆಬ್ರವರಿ 11, 2020 | |
ಗಣಿತ ರಸಪ್ರಶ್ನೆ | ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ |
ಪ್ರಬಂಧ | ಮಧ್ಯಾಹ್ನ 12:30 ರಿಂದ 1:30 ರವರೆಗೆ |
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ | |
ಗಣಿತ ಮಾದರಿ | ಮಧ್ಯಾಹ್ನ 2:30 ರಿಂದ 4:00 ರವರೆಗೆ |
ಫೆಬ್ರವರಿ 12, 2020 | |
ಜಿತ್ರಕಲೆ/ಪೈಂಟಿಂಗ್ | 10:30 ರಿಂದ 11:30 ರವರೆಗೆ |
ನಾಟಕ | 10:30 ರ ನಂತರ |
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ | |
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ | 4:30 ರ ನಂತರ |
ಸೂಚನೆಗಳು:
1. ಪ್ರಬಂಧ
- ಪ್ರಬಂಧ ಸ್ಪರ್ಧೆಯ ವಿಷಯ (ಪಿಜಿ ಮತ್ತು ಯುಜಿ): ಶುದ್ದ ಮತ್ತು ಹಸಿರು ಶಕ್ತಿ (ಕ್ಲೀನ್ ಮತ್ತು ಗ್ರೀನ್ ಎನರ್ಜಿ)
2. ಗಣಿತ ಮಾದರಿ
- ಮಾದರಿ ಪ್ರದರ್ಶನಕ್ಕೆ ಟೇಬಲ್ ಒದಗಿಸಲಾಗುವುದು
- ವಿದ್ಯುತ್ ಅಗತ್ಯವಿದ್ದರೆ ಒದಗಿಸಲಾಗುವುದು. ಆದರೆ, ಈ ಬಗ್ಗೆ ಮೊದಲೇ ಅಕಾಡೆಮಿಗೆ ತಿಳಿಸುವುದು
3. ಡ್ರಾಯಿಂಗ್/ ಪೇಂಟಿಂಗ್
- ಡ್ರಾಯಿಂಗ್ ಶೀಟ್ ಮಾತ್ರ ಒದಗಿಸಲಾಗುವುದು
4. ನಾಟಕ
- ಡ್ರೆಸ್ಸಿಂಗ್ಗೆ ಕೊಠಡಿ ಒದಗಿಸಲಾಗುವುದು
- ಪ್ರೊಜೆಕ್ಟರ್ ಅಗತ್ಯವಿದ್ದರೆ ಮೊದಲೇ ತಿಳಿಸುವುದು
- ನಾಲ್ಕು ಕಾಲರ್ ಮೈಕ್ಗಳನ್ನು ಒದಗಿಸಲಾಗುವುದು
- ರಾಜ್ಯ ಮಟ್ಟ : ಫೆಬ್ರವರಿ 28, 2020